‘ಪ್ರೇಮ ಬರಹ’ ಚಿತ್ರ ಖ್ಯಾತಿಯ ನಟ ಚಂದನ್ ಕುಮಾರ್ ಡೈರೆಕ್ಟರ್ ಆಗುತ್ತಿದ್ದಾರೆ. ಚಿತ್ರಕ್ಕೆ “ಫ್ಲರ್ಟ್” ಅನ್ನುವ ಟೈಟಲ್ ಕೂಡ ಇಟ್ಟಿದ್ದಾರೆ.
ಚಂದನ್ ತಮ್ಮ ಮೊದಲ ಚಿತ್ರದ ತಯಾರಿ ಈಗಾಗಲೇ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಮಳೆ ಬೇಕಿರೋ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಮಾಡಲಿದ್ದಾರೆ.
ರೋಮ್ಯಾಂಟಿಕ್ ಮತ್ತು ಕಾಮಿಡಿ ಕೂಡ ಇರೋ ಸಿನಿಮಾ “ಫ್ಲರ್ಟ್”. ಎಲ್ಲರಿಗೂ ಇಷ್ಟ ಆಗೋ ರೀತಿಯಲ್ಲಿಯೇ ಈ ಕಥೆ ಇರುತ್ತದೆ. ಜನರಿಗೆ ಹೊಸ ರೀತಿಯಲ್ಲಿ ಕಥೆ ಹೇಳೋಕೆ ಚಂದನ್ ಕುಮಾರ್ ಮುಂದಾಗಿದ್ದಾರೆ. ಅವರೇ ಈ ಚಿತ್ರಕ್ಕೆ ಹೀರೋ ಆಗಿದ್ದಾರೆ.
”ಡೈರೆಕ್ಷನ್ ಬಗ್ಗೆ ಸುಮಾರು ತಿಳಿದುಕೊಂಡಿದ್ದೇನೆ. ಸೀರಿಯಲ್, ಸಿನಿಮಾ ಹೀಗೆ ಎಲ್ಲೆಡೆ ಕೆಲಸ ಮಾಡಿರೋದ್ರಿಂದ ಡೈರೆಕ್ಷನ್ ಬಗ್ಗೆ ಪ್ರಾಕ್ಟೀಕಲ್ ಆಗಿಯೇ ನೋಡಿದ್ದೇನೆ. ಆ ಅನುಭವ ಹಾಗೂ ಒಳ್ಳೆ ಕಥೆಚೆನ್ನಾಗಿಯೇ ಹೇಳಬೇಕು ಅನ್ನೋ ನಿಟ್ಟಿನಲ್ಲಿಡೈರಕ್ಷನ್ ಮಾಡುತ್ತಿದ್ದೇನೆ” ಎಂದು ಚಂದನ್ ಕುಮಾರ್ ಹೇಳಿದ್ದಾರೆ.
ಚಂದನ್ ಕುಮಾರ್ ಈ ಮೊದಲು ನಟರಾಗಿ ಗುರುತಿಸಿಕೊಂಡಿದ್ದಾರೆ. ಸೀರಿಯಲ್, ಸಿನಿಮಾ ಹೀಗೆ ಎರಡರಲ್ಲೂ ಲೀಡ್ ರೋಲ್ ಮಾಡಿಕೊಂಡು ಬಂದಿದ್ದಾರೆ. ಹೋಟೆಲ್ ಉದ್ಯಮದಲ್ಲೂ ತೊಡಗಿಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ.
ಚಂದನ್ ಕುಮಾರ್ ಎವರೆಸ್ಟ್ ಪಿಕ್ಚರ್ಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಸ್ನೇಹಿತರು ಈ ಚಿತ್ರ ನಿರ್ಮಾಣಕ್ಕೆ ಸಾಥ್ ಕೊಟ್ಟಿದ್ದಾರೆ.
Be the first to comment