‘ಕೋಟಿ’ ಖಳನಾಯಕನ ಪೋಸ್ಟರ್ ಬಿಡುಗಡೆ

ಡಾಲಿ ಧನಂಜಯ ಅಭಿನಯದ ‘ಕೋಟಿ’ ಚಿತ್ರದ ಖಳನಾಯಕನ ಪಾತ್ರದ ಪೋಸ್ಟರ್ ಬಿಡುಗಡೆ ಆಗಿದೆ.

‘ಕೋಟಿ’ ಚಿತ್ರದಲ್ಲಿ ರಮೇಶ್ ಇಂದಿರಾ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಚಿತ್ರತಂಡ ಈ ಹಿಂದೆ ಘೋಷಿಸಿತ್ತು. ಇದೀಗ ನಟನ ಪಾತ್ರದ ಪೋಸ್ಟರ್ ನ್ನು ಅನಾವರಣಗೊಳಿಸಿದ್ದು, ರಮೇಶ್ ಇಂದಿರಾ ‘ಕೋಟಿ’ಯಲ್ಲಿ ದಿನೂ ಸಾವ್ಕಾರ್ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ. ಬಿಳಿ ಕೂದಲು ಮತ್ತು ಗಡ್ಡದೊಂದಿಗೆ ಖಳನಾಯಕ ಪ್ಲಾಟಿನಂ ಚೈನ್ ಧರಿಸಿ ಸಿಗರೇಟ್ ಸೇದುತ್ತಿರುವುದು ಪೋಸ್ಟರ್‌ನಲ್ಲಿ ಕಂಡು ಬಂದಿದೆ.

”’ಕೋಟಿ’ಯ ಖಳನಾಯಕನ ಹೆಸರು ದಿನೂ ಸಾವ್ಕಾರ್.‌ ರಣತಂತ್ರದಲ್ಲಿ ಎತ್ತಿದ ಕೈ. ಬುದ್ಧಿವಂತ. ಸ್ವಲ್ಪ ಅನ್‌ ಸ್ಟೇಬಲ್.‌ ತಾನು ಹೇಳಿದ್ದನ್ನು ಎಲ್ಲರೂ ಕೇಳಬೇಕು ಎಂದುಕೊಂಡಿರುವ ವ್ಯಕ್ತಿ. ಮಾತು ಕೇಳದವರನ್ನು ಕೇಳಿಸುತ್ತೇನೆ ಎನ್ನುವುದನ್ನು ನಂಬಿದವನು. ಸಿಕ್ಕಾಪಟ್ಟೆ ಮಜಾ ಕೊಡುವ ಪಾತ್ರ ದಿನೂ ಸಾವ್ಕಾರ್ ದು” ಎಂದು ರಮೇಶ್ ಇಂದಿರಾ ಅವರ ಪಾತ್ರದ ಬಗ್ಗೆ ಕೋಟಿ ಬರಹಗಾರ ಮತ್ತು ನಿರ್ದೇಶಕ ಪರಮ್ ಅವರು ಹೇಳಿದ್ದಾರೆ.

ಕೋಟಿ ಸಿನಿಮಾ  ಜಿಯೋ ಸ್ಟುಡಿಯೋಸ್‌ನ ಕನ್ನಡದ  ಮೊದಲ ಚಿತ್ರವಾಗಿದೆ. ಚಿತ್ರ ಜೂನ್ 14 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರಕ್ಕೆ ಯೋಗರಾಜ್ ಭಟ್ ಜೊತೆಗೆ ಸಾಹಿತ್ಯ ಬರೆದಿರುವ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ನೋಬಿನ್ ಪಾಲ್ ಅವರ ಹಿನ್ನೆಲೆ ಸಂಗೀತ, ಪ್ರತೀಕ್ ಶೆಟ್ಟಿ (ಕಾಂತಾರ) ಸಂಕಲನ, ಅರುಣ್ ಬ್ರಹ್ಮನ್ ಛಾಯಾಗ್ರಹಣವಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!