bun tea: ಏಪ್ರಿಲ್‌ ನಲ್ಲಿ ‘ಬನ್ ಟೀ’ ತೆರೆಗೆ

ಯುವ ತಂಡ ನಿರ್ಮಿಸಿರುವ ‘ಬನ್ ಟೀ’ ಚಿತ್ರ ಏಪ್ರಿಲ್‌ ತಿಂಗಳಿನಲ್ಲಿ ತೆರೆಗೆ ಬರಲಿದೆ.

ಆನ್ ಲೈನ್ ಎಡಿಟರ್ ಆಗಿ ಗುರುತಿಸಿಕೊಂಡಿರುವ, ಖಾಕಿ ಸಿನಿಮಾ ಬರಹಗಾರರಲ್ಲೊಬ್ಬರಾಗಿದ್ದ ಉದಯ್ ಕುಮಾರ್ ಪಿ.ಎಸ್. ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದೆ.

ನಿರ್ದೇಶಕ ಉದಯ್ ಅವರು, ‘ಸಿನಿಮಾ ಅವಕಾಶಕ್ಕಾಗಿ ಗಾಂಧಿನಗರ ಸುತ್ತುವಾಗ ‘ಬನ್ ಟೀ’ ನಮ್ಮ ಊಟವಾಗಿತ್ತು. ಶೀರ್ಷಿಕೆ ವಿಭಿನ್ನವಾಗಿದೆ. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಕಷ್ಟಪಟ್ಟು ಓದು ಅನ್ನುವ ಬದಲು ಇಟ್ಟಪಟ್ಟು ಓದು ಅನ್ನುವುದನ್ನು ಯಾಕೆ ಹೇಳುವುದಿಲ್ಲ ಎಂಬುದೇ ಚಿತ್ರದ ಒಟ್ಟಾರೆ ಸಾರಾಂಶ’ ಎಂದಿದ್ದಾರೆ.

ಮೌರ್ಯ, ತನ್ಮಯ್, ಉಮೇಶ್ ಸಕ್ಕರೆನಾಡು, ಶ್ರೀದೇವಿ, ನಿಶಾ, ಗುಂಡಣ್ಣ, ಸುನಿಲ್ ನಟಿಸಿರುವ ಈ ಚಿತ್ರಕ್ಕೆ ರಾಧಾಕೃಷ್ಣ ಬ್ಯಾನರ್ ಆರ್. ಕೇಶವ ನಿರ್ಮಾಣ ಮಾಡಿದ್ದಾರೆ. ರಾಜರಾವ್ ಅಂಚಲ್ಕರ್ ಕ್ಯಾಮೆರಾ, ಪ್ರದ್ಯೋತನ್ ಸಂಗೀತ ಸಿನಿಮಾಕ್ಕಿದೆ.

‘ಬನ್ ಟೀ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟ್ರೈಲರ್‌ ಬಿಡುಗಡೆ ಮಾಡಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!