Harsha: ಟಾಲಿವುಡ್ ಗೆ ಹೊರಟ ಹರ್ಷ

ಸ್ಟಾರ್ ನಿರ್ದೇಶಕ ಎ.ಹರ್ಷ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಇತ್ತೀಚೆಗೆ ಹರ್ಷ ನಿರ್ದೇಶನದ `ವೇದ’ ಚಿತ್ರದ ಸೂಪರ್ ಸಕ್ಸಸ್ ನಂತರ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ.

ಪ್ರಶಾಂತ್ ನೀಲ್ ಅವರಂತೆಯೇ ತೆಲುಗು ಚಿತ್ರರಂಗದಲ್ಲಿ ಮಿಂಚಲು ಹರ್ಷ ರೆಡಿಯಾಗಿದ್ದಾರೆ. ತೆಲುಗಿನ ಮಾಸ್ ಹೀರೋ ಗೋಪಿಚಂದ್‌ಗೆ ಹರ್ಷ ನಿರ್ದೇಶನ ಮಾಡ್ತಿದ್ದಾರೆ.

`ವೇದ’ ಚಿತ್ರದ ಸಕ್ಸಸ್ ರೆಸ್ಪಾನ್ಸ್ ನೋಡಿ ನಟ ಗೋಪಿಚಂದ್ ಕೂಡ ಕಥೆ ಕೇಳಿ, ಎ. ಹರ್ಷ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಧ ಮೋಹನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಸೀತಾರಾಮ ಕಲ್ಯಾಣ, ಭಜರಂಗಿ, ಭಜರಂಗಿ 2, ವೇದ, ಹೀಗೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಎ.ಹರ್ಷ ನಿರ್ದೇಶನ ಮಾಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!