Timmayya and Timmayya Review : ಭಾವನೆಗಳ ಸಾಗರ ತಿಮ್ಮಯ್ಯ & ತಿಮ್ಮಯ್ಯ

ಚಿತ್ರ: ತಿಮ್ಮಯ್ಯ & ತಿಮ್ಮಯ್ಯ

ನಿರ್ದೇಶನ: ಸಂಜಯ್‌ ಶರ್ಮ
ತಾರಾಗಣ: ದಿಗಂತ್, ಅನಂತನಾಗ್, ಐಂದ್ರಿತಾ ರೇ, ಶುಭ್ರ ಅಯ್ಯಪ್ಪ ಇತರರು.
ರೇಟಿಂಗ್: 3.5/5

ಸಂಬಂಧಗಳ ಅನುಬಂಧ ಹಾಗೂ ಭಾವನೆಗಳ ಕುರಿತು ಹೇಳ ಹೊರಟಿರುವ ಚಿತ್ರ ಆಗಿ ತಿಮ್ಮಯ್ಯ & ತಿಮ್ಮಯ್ಯ ಪ್ರೇಕ್ಷಕರ ಗಮನ ಸೆಳೆಯುತ್ತದೆ.

“ತಿಮ್ಮಯ್ಯ &ತಿಮ್ಮಯ್ಯ’ ಕಂಪ್ಲೀಟ್‌ ಫ್ಯಾಮಿಲಿ ಡ್ರಾಮಾ ಚಿತ್ರ ಆಗಿದ್ದು, ಸೀನಿಯರ್‌ ಮತ್ತು ಜೂನಿಯರ್‌ ತಿಮ್ಮಯ್ಯ ನಡುವೆ ನಡೆಯುವ ಕಥೆಯಾಗಿದೆ. ಇಲ್ಲಿ ತಿಮ್ಮಯ್ಯ ಕುಟುಂಬದ ಆಸ್ತಿಯಾದ “ಬೆಂಗಳೂರು ಕೆಫೆ’ಯ ಅಳಿವು ಉಳಿವಿನ ಸುತ್ತ ಇಡೀ ಸಿನಿಮಾ ಸಾಗುತ್ತದೆ.

ಚಿತ್ರದ ಮೊದಲರ್ಧ ಪ್ರೇಕ್ಷಕರನ್ನು ನಗುವಿನಲ್ಲಿ ತೇಲಿಸಿದರೆ, ದ್ವಿತೀಯಾರ್ಧಕ್ಕೆ ಸೆಂಟಿಮೆಂಟ್‌ ಅಂಶಗಳೊಂದಿಗೆ ಸಾಗುತ್ತದೆ. ನಿರ್ದೇಶಕ ಸಂಜಯ್‌ ಶರ್ಮ ತಮ್ಮ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ. ಒಂದಷ್ಟು ಔಟ್‌ ಆಫ್ ಬಾಕ್ಸ್‌ ಯೋಚನೆಯೊಂದಿಗೆ ಮಾಡಿರುವ ದೃಶ್ಯಗಳು ಹೆಚ್ಚು ಇಷ್ಟವಾಗುತ್ತವೆ.

ಅನಂತ್‌ ನಾಗ್‌ ಹಾಗೂ ದಿಗಂತ್‌ ಅವರ ಅಜ್ಜ -ಮೊಮ್ಮಗನ ಕಾಂಬಿನೇಷನ್‌ ಸುಂದರವಾಗಿದೆ. ಅವರ ಭಾವನಾತ್ಮಕ ದೃಶ್ಯಗಳಲ್ಲಿನ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಅನಂತ್‌ನಾಗ್‌ ಅವರ ಮ್ಯಾನರಿಸಂ, ಎನರ್ಜಿ, ನಟನೆ ಸಿನಿಮಾದ ಜೀವಾಳ ಆಗಿದೆ.

ವಿನೀತ್‌ ಕುಮಾರ್‌ ಹಾಗೂ ಪ್ರಕಾಶ್‌ ತುಮ್ಮಿನಾಡು ಅವರ ಕಾಮಿಡಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ನಾಯಕಿಯರಾದ ಐಂದ್ರಿತಾ ಮತ್ತು ಶುಭ್ರ ಅಯ್ಯಪ್ಪ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಸೆಂಟಿಮೆಂಟ್ ಚಿತ್ರ ಇಷ್ಟಪಡುವವರಿಗೆ ತಿಮ್ಮಯ್ಯ & ತಿಮ್ಮಯ್ಯ ಒಳ್ಳೆಯ ಅನುಭವ ನೀಡುತ್ತದೆ.
_____

Be the first to comment

Leave a Reply

Your email address will not be published. Required fields are marked *

Translate »
error: Content is protected !!