ಇಂದು ಒಟಿಟಿ ಮತ್ತು ಥಿಯೇಟರ್ ನಲ್ಲಿ ಹೊಸ ಚಿತ್ರ

ಒಟಿಟಿ ಮತ್ತು ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸುವವರಿಗೆ ಇಂದು ಭರ್ಜರಿ ಮನರಂಜನೆ ಸಿಗಲಿದೆ.

ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ದಿಲ್ ಪಸಂದ್ ಸಿನಿಮಾ ಇಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿದೆ. ಕಾಮಿಡಿ, ರೊಮ್ಯಾನ್ಸ್, ಫ್ಯಾಮಿಲಿ ಎಂಟರ್ ಟೈನರ್ ಇದಾಗಿದ್ದು, ವೀಕ್ಷಕರಿಗೆ ಮನರಂಜನೆ ಒದಗಿಸುವುದು ಪಕ್ಕಾ ಎನ್ನಲಾಗಿದೆ.

ಶ್ರೇಯಸ್ ಮಂಜು ನಾಯಕರಾಗಿರುವ ನಂದಕಿಶೋರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ರಾಣ ಸಿನಿಮಾ ಇಂದು ಬಿಡುಗಡೆಯಾಗಿದೆ. ಪೊಗರು ಹಿಟ್ ಸಿನಿಮಾ ಕೊಟ್ಟ ನಂದಕಿಶೋರ್ ಈಗ ಶ್ರೇಯಸ್ ಅವರನ್ನು ನಾಯಕರಾಗಿ ಮಾಡಿ ಮಾಸ್ ಸಿನಿಮಾ ಮಾಡಿದ್ದಾರೆ.

ಇನ್ನು ಒಟಿಟಿ ಪ್ರೇಕ್ಷಕರಿಗಾಗಿ ಇಂದಿನಿಂದ ಗುರು ಶಿಷ್ಯರು ಸಿನಿಮಾ ಪ್ರಸಾರವಾಗುತ್ತಿದೆ. ಶರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರ ಮಕ್ಕಳು ನಟಿಸಿರುವ ‘ಗುರು ಶಿಷ್ಯರು’ ಸಿನಿಮಾ ಇಂದಿನಿಂದ ಜೀ5 ಆಪ್ ನಲ್ಲಿ ಪ್ರಸಾರವಾಗುತ್ತಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!