ಕಿಯಾ ಕಾರೆನ್ಸ್‌ ಎಸ್‌ಯುವಿ ಅನಾವರಣ  

ಬೆಂಗಳೂರು : ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಿಯಾ ಕಾರ್ಪೋರೇಷನ್ ಕಂಪನಿಯು ಅತ್ಯಂತ ಸ್ಟೈಲೀಷ್ ಹಾಗೂ ಹೈಸೆಕ್ಯೂರ್ ಹೊಂದಿರುವ ಕಿಯಾ ಕ್ಯಾರೆನ್ಸ್‌ ಎಂಬ ಹೆಸರಿನ ನೂತನ ಕಾರನ್ನು ಅನಾವರಣಗೊಳಿಸಿದೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಉತ್ತಮ ವಿನ್ಯಾಸ ಹಾಗೂ ಹಲವು ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನೂತನ ಕಾರನ್ನು ಅನಾವರಣಗೊಳಿಸಲಾಯಿತು.

ಹಲವು ಮಾನದಂಡದೊಂದಿಗೆ ಬಿಡುಗಡೆಯಾಗಿರುವ ಈ ನವೀನ ಮಾದರಿಯ ನೂತನ ಕಿಯಾ ಕ್ಯಾರೆನ್ಸ್‌ ದೊಡ್ಡ ಸದ್ದು ಮಾಡುತ್ತಿಿದೆ. 2022ರ ಹೊಸ ವರ್ಷದ ಕೊಡುಗೆಯಾಗಿ ಮಾರುಕಟ್ಟೆೆಗಳಲ್ಲಿ ನಿಮ್ಮ ನೆಚ್ಚಿನ ಕಿಯಾ ಕ್ಯಾರೆನ್ಸ್‌ ನಿಮ್ಮ ಮನೆ ತುಂಬಲಿದೆ ಎಂದು ಕಂಪನಿ ಹರ್ಷ ವ್ಯಕ್ತಪಡಿಸಿದೆ.

6 ಸ್ಟ್ಯಾಂಡರ್ಡ್ ಏರ್‌ಬ್ಯಾಗ್‌ಗಳೊಂದಿಗೆ ರೂಪುಗೊಳಿಸಿರುವ ಈ ಕಾರುಗಳಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ಪ್ರಮುಖವಾಗಿ ಭಾರತೀಯ ಕುಟುಂಬಗಳ ಆಸಕ್ತಿಿಯನ್ನು ಗಮನದಲ್ಲಿ ಇರಿಸಿಕೊಂಡು ರೂಪುಗೊಳಿಸಿರುವ ಕಿಯಾ ಕ್ಯಾರೆನ್‌ಸ್‌ ಕ್ರಾಂತಿಕಾರಿ ವಿನ್ಯಾಸ ಹಾಗೂ ಪ್ರಮುಖ ವೈಶಿಷ್ಟ್ಯಗಳ ಮೂಲಕ ಗಮನ ಸೆಳೆಯುತ್ತಿಿದೆ. ಕಿಯಾ ಕ್ಯಾರೆನ್‌ಸ್‌‌ನಲ್ಲಿ ಆರಾಮದಾಯಕ ಪ್ರಯಾಣಕ್ಕೆ ಒತ್ತು ನೀಡಲಾಗಿದೆ. ಇದರಲ್ಲಿ ಮೂರು ಸಾಲಿನ ವಿಶಾಲವಾದ ಆಸನ ವ್ಯವಸ್ಥೆೆ ಇದ್ದು, ಅತೀ ಉದ್ದದ ವೀಲ್‌ಬೇಸ್ ಸಹ ಹೊಂದಿದೆ. ಈ ನೂತನ ಕಾರು ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಸುರಕ್ಷತೆಗೆ ಹೊಸ ಭಾಷ್ಯವನ್ನೆ ಬರೆಯಲಿದೆ ಎಂಬ ಅಭಿಪ್ರಾಾಯ ಗ್ರಾಹಕವಲಯದಲ್ಲಿ ಕೇಳಿಬರುತ್ತಿಿದೆ.

ಮುಂದಿನ ಪೀಳಿಗೆಯ ಹಿತಾಸಕ್ತಿ:

ಮುಂದಿನ ಪೀಳಿಗೆಯ ಹಿತಾಸಕ್ತಿಿಯನ್ನು ಕೇಂದ್ರೀಕರಿಸಿ ಕಿಯಾ ಕ್ಯಾರೆನ್‌ಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಕಿಯಾ ಕನೆಕ್‌ಟ್‌ ಅಪ್ಲಿಕೇಶನ್ನಂತಹ ಸಂಪರ್ಕ ವೈಶಿಷ್ಟ್ಯಗಳಿಂದ ಹೊಂದಿಕೊಳ್ಳುವ ಆಸನ ಆಯ್ಕೆ ಮತ್ತು ಟ್ರೇ ಅಡಿಯಲ್ಲಿ ಸ್ಲೈಡಿಂಗ್ ಟೈಪ್ ಸೀಟ್, ಹಿಂತೆಗೆದುಕೊಳ್ಳುವ ಸೀಟ್‌ಬ್ಯಾಕ್ ಟೇಬಲ್, ಹಿಂಬದಿಯ ಡೋರ್ ಸ್ಪಾಟ್‌ಲ್ಯಾಂಪ್ ಮತ್ತು ಮೂರನೇ ಸಾಲಿನಲ್ಲಿ ಬಾಟಲಿ ಮತ್ತು ಗ್ಯಾಜೆಟ್ ಹೋಲರ್, ಕ್ಯಾರೆನ್‌ಸ್‌‌ನ ವೈಶಿಷ್ಟ್ಯಗಳಲ್ಲಿ ಮುಖ್ಯವಾಗಿವೆ.

ಕಿಯಾ ಸಂಸ್ಥೆೆಯು ಭಾರತೀಯ ಮಾರುಕಟ್ಟೆೆಗೆ ಈ ಹಿಂದೆ ಸೆಲ್ಟೋಸ್, ಕಾರ್ನಿವಲ್ ಮತ್ತು ಸೋನೆಟ್ ಎಂಬ 3 ವಾಹನಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾರುಕಟ್ಟೆಗೆ ಮುಂದಿನ ವರ್ಷ ಬಿಡುಗಡೆಯಾಗಲಿರುವ ಕಿಯಾ ಕ್ಯಾರೆನ್‌ಸ್‌ ಕಾರು ಹಲವು ವೈಶಿಷ್ಟ್ಯಗಳ ಆಗರವಾಗಿದೆ. ದೇಶಿಯ ವಾಹನ ಮಾರುಕಟ್ಟೆೆಯಲ್ಲಿ ತನ್ನದೇ ಛಾಪು ಉಳಿಸಿಕೊಂಡು ಸ್ಟ್ಯಾಂಡರ್ಡ್ ಬ್ರ್ಯಾಂಡಿಂಗ್ ಆಗಿರುವ ಕಿಯಾ ಸಂಸ್ಥೆ ಹೊಸತನಗಳಿಗೆ ತೆರೆದುಕೊಳ್ಳುತ್ತಿಿದೆ ಎನ್ನಬಹುದಾಗಿದೆ.

ಹೋ ಸುಂಗ್ ಸಾಂಗ್, ಕಿಯಾ ಕಾರ್ಪೊರೇಶನ್ ಅಧ್ಯಕ್ಷ ಮತ್ತು ಸಿಇಒ ಕಿಯಾ ಕ್ಯಾರೆನ್‌ಸ್‌‌ನಲ್ಲಿ ವಿನೂತನ ವಿನ್ಯಾಾಸ, ಸುರಕ್ಷತೆಗೆ ಹೆಚ್ಚು ನೀಡಲಾಗಿದೆ. ಆಧುನಿಕ ಭಾರತೀಯ ಕುಟುಂಬಗಳ ಆಸಕ್ತಿಿಯನ್ನಾಧರಿಸಿದೆ. ಆರಾಮದಾಯ ಪ್ರಯಾಣದ ಜತೆಗೆ ಸುರಕ್ಷತೆಗೆ ಆದ್ಯತೆ ನೀಡಿ ವಿನ್ಯಾಸಗೊಳಿಸಿರುವ ಕಿಯಾ ಕ್ಯಾರೆನ್‌ಸ್‌ ಅನ್ನು ಗ್ರಾಹಕರು ಬಹುಬೇಗ ಒಪ್ಪಿಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕಲಾತ್ಮಕತೆ, ಸುರಕ್ಷತೆ, ಆರಾಮದಾಯಕ ಹಾಗೂ ರೋಮಾಂಚನಕಾರಿ ಪ್ರಯಾಣದ ಅನುಭವ ನೀಡುವಂತೆ ವಿನ್ಯಾಾಸಗೊಳಿಸಿರುವ ಕಿಯಾ ಕ್ಯಾಾರೆನ್‌ಸ್‌ ಭಾರತೀಯ ಕುಟುಂಬಗಳಿಗೆ ಹೇಳಿ ಮಾಡಿಸಿದಂತಿದೆ. ವಿನೂತನವಾಗಿ ವಿನ್ಯಾಾಸಗೊಳಿಸಿರುವ ಈ ಕಾರು ಆಟೋಮೊಬೈಲ್ ಕ್ಷೇತ್ರದಲ್ಲಿ ಮೈಲುಗಲ್ಲಾಗಲಿದೆ. ಟೇ-ಜಿನ್ ಪಾರ್ಕ್, ಕಿಯಾ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹೇಳಿದರು.

 

ಕ್ಯಾರೆನ್‌ಸ್‌‌ಪ್ರಮುಖ ಆಕರ್ಷಣೆಗಳು :

* 10.25 ಇಂಚ್‌ನ ಎಚ್‌ಡಿ ಟಚ್‌ಸ್ಕ್ರೀನ್, ನ್ಯಾವಿಗೇಶನ್   * 8 ಸ್ಪೀಕರ್‌ಗಳೊಂದಿಗೆ ಪ್ರೀಮಿಯಂ ಸೌಂಡ್ ಸಿಸ್ಟಮ್  * ಆಂಬಿಯೆಂಟ್ ಮೂಡ್ ಲೈಟಿಂಗ್  * ಬ್ಯಾಕ್ಟೀರಿಯಾದಿಂದ ರಕ್ಷಣೆಗಾಗಿ ಸ್ಮಾರ್ಟ್ ಪ್ಯೂರ್ ಏರ್ ಪ್ಯೂರಿಫೈಯರ್ * 6 ಏರ್‌ಬ್ಯಾಗ್, ಆಲ್ ವೀಲ್ ಡಿಸ್‌ಕ್‌ ಬ್ರೇಕ್ * ಮಲ್ಟಿ ಡ್ರೈವ್ ಮೋಡ್‌ಗಳು

* ಒನ್ ಟಚ್ ಈಸಿ ಎಲೆಕ್ಟ್ರಿಕ್ ಟಂಬಲ್  * ಸ್ಕೈಲೈಟ್ ಸನ್‌ರೂಫ್ * ಲಾಂಗೆಸ್‌ಟ್‌ ವೀಲ್‌ಬೇಸ್ ಜತೆಗೆ ವಿಶಾಲವಾದ ಕ್ಯಾಬಿನ್ ಸ್ಪೇಸ್

*ಹೆಡ್ ಲ್ಯಾಪ್‌ಗಳಲ್ಲಿ ಹೊಸ ಸಿಗ್ನೇಚರ್ ಲೈಟಿಂಗ್ ಸಿಸ್ಟಂ  * ಕ್ರೌನ್ ಜ್ಯುವೆಲ್ ಹೆಡ್‌ಲ್ಯಾಂಪ್‌ಗಳು

*ಸ್ಟಾರ್‌ಮ್ಯಾಪ್ ಎಲ್ಇಡಿ ಟೈಲ್ ಲ್ಯಾಂಪ್‌ಸ್‌  *ಡ್ಯುಯಲ್ ಟೋನ್ ಕ್ರಿಸ್ಟಲ್ಕಟ್ ಅಲಾಯ್ ವೀಲ್‌ಸ್‌

* ಸ್ಟೈಲಿಷ್ ಕ್ರೋಮ್ ಬಂಪರ್  * ಸ್ಟಾಂಡರ್ಡ್ ಹೈ ಗ್ಲಾಸ್ ಡ್ಯಾಶ್‌ಬೋರ್ಡ್

* ಸೀಟ್ ಬ್ಯಾಕ್ ಫೋಲ್ಡಿಂಗ್ ಆರ್ಮ್‌ರೆಸ್‌ಟ್‌  * ಪ್ಯಾಡಲ್ ಶಿಫ್ಟರ್‌ಗಳು

*  ಡಿಫ್ಯೂಸ್‌ಡ್‌ ಎಸಿ ವೆಂಟ್‌ಗಳು  * ಸ್ಮಾಟ್‌ಫೋನ್ ವೈರ್‌ಲೆಸ್ ಚಾರ್ಜರ್

* ಡೋರ್‌ಗಳಿಗೆ ಸನ್‌ಶೇಡ್ ಕರ್ಟೈನ್‌ಸ್‌ * ಕೂಲಿಂಗ್ ಕಪ್ ಹೋಲ್ಡರ್  * ಸ್ಲೈಡಿಂಗ್ ಟೈಪ್ ಸೀಟ್, ಈಸಿ ಪುಶ್

Be the first to comment

Leave a Reply

Your email address will not be published. Required fields are marked *

Translate »
error: Content is protected !!