ಚಂದನವನ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವ ಪೂಜಾ ರಮೇಶ್ ಅವರು, ಇದೀಗ 2021ನೇ ಸಾಲಿನ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚಿಗೆ ಇನ್ಫಾಂಟ್ ಸ್ಕೂಲ್ ಆಫ್ ಫ್ಯಾಶನ್ ಸಂಸ್ಥೆ ಮಿಸ್ಟರ್ & ಮಿಸ್ ಇಂಡಿಯಾ -2021 ಶೋ ಆಯೋಜಿಸಿತ್ತು. ಈ ಶೋನಲ್ಲಿ ಭಾಗವಹಿಸಿದ್ದ ಪೂಜಾ ರಮೇಶ್ ಅವರು, ಮಿಸ್ ಇಂಡಿಯಾ ಟೈಟಲ್ ವಿನ್ನರ್ ಆಗಿದ್ದಾರೆ. ಜೊತೆಗೆ ಬ್ಯೂಟಿಫುಲ್ ಹೇರ್ ಅಂಡ್ ಬೆಸ್ಟ್ ಹೇರ್ ಸ್ಟೈಲ್ ಗೆ ಕೂಡ ಅವರಿಗೆ ಅವಾರ್ಡ್ ಸಿಕ್ಕಿದೆ.
ಅಂದಹಾಗೆ ಪೂಜಾ ರಮೇಶ್ ಅವರು ತಮ್ಮ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಪೂಜಾ ರಮೇಶ್, 2009ರಲ್ಲಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟರು. ಪೇಪರ್ ದೋಣಿ, ಲಹರಿ, ತಾಂಡವ ಮಹಾಕಾಳಿಯಲ್ಲಿ ಚಿತ್ರಗಳಲ್ಲಿ ಅಭಿನಯಿಸಿದ್ದ ಪೂಜಾ ರಮೇಶ್, 2015ರಿಂದ ಚಿತ್ರರಂಗದಿಂದ ದೂರವಿದ್ದರು. ಈಗ ಪಿಟ್ ಅಂಡ್ ಫೈನ್ ಆಗಿ ಮತ್ತೆ ಕಿರುತೆರೆ ಹಾಗೂ ಧಾರಾವಾಹಿಗಳತ್ತ ಮುಖ ಮಾಡಿದ್ದಾರೆ. ಈಗಾಗಲೇ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಚಿರಪರಿಚಿತವಾಗಿದ್ದಾರೆ. ಪೂಜ ರಮೇಶ್ ಅವರು ಫ್ಯಾಷನ್ ಶೋಗಳಲ್ಲೂ ಕೂಡ ತನ್ನದೆಯಾದ ಚಾಪು ಮೂಡಿಸಿದ್ದು, ಮಾಡೆಲ್ ಕ್ಷೇತ್ರದಲ್ಲೂ ಕೂಡ ಹೆಸರು ಮಾಡಿದ್ದಾರೆ.
ಕೋವಿಡ್ ಟೈಮ್ ನಲ್ಲಿ ಹಲವು ಹಿರಿಯ ಕಲಾವಿದರ ಮನೆ ಬಾಗಿಲಿಗೆ ಹೋಗಿ ಯೋಗಕ್ಷೇಮ ವಿಚಾರಿಸಿ ಅಹಾರ ಕಿಟ್ ನೀಡಿ ಆರ್ಶಿವಾದ ಪಡೆದುಕೊಂಡಿದ್ದಾರೆ. ಇದಲ್ಲದೆ ಇತ್ತೀಚೆಗೆ ರಾಜ್ಯದ ಸಾಧಕರ ಸಾಧನೆಯ ಪಟ್ಟಿಯಲ್ಲಿ ಮಹಿಳಾ ಸಾಧಕಿ ಪ್ರಶಸ್ತಿ ಅಲಂಕರಿಸಿದ್ದಾರೆ.
ಹಲವು ವರ್ಷಗಳ ಬಳಿಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ಪೂಜಾ ಅವರಿಗೆ ಹಲವು ಸಿನಿಮಾ ಆಫರ್ ಗಳು ಬರುತ್ತಿವೆ. ಹೀಗೆ ಹಲವು ಶೋ ಹಾಗೂ ಸಿನಿಮಾಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬುದೇ ನಮ್ಮ ಆಶಯ. ದೀಪಾವಳಿ ಹಬ್ಬದಂತೆ ನಿಮ್ಮ ಸಾಧನೆಯ ಯಶಸ್ಸು ಬೆಳಗಲಿ, ಆಲ್ ದಿ ಬೆಸ್ಟ್ ಪೂಜಾ ರಮೇಶ್.
Be the first to comment