ಹಾಟ್​ ಫೋಟೋ​ ಮೂಲಕ ಪಡ್ಡೆ ಹುಡುಗರ ಗ್ಯಾಂಗ್ ಹೆಚ್ಚಿಸಿಕೊಂಡ ಸ್ಯಾಂಡಲ್​ವುಡ್​ ನಟಿ ಅಕ್ಷರಾ ಗೌಡ

1991ರ ಡಿಸೆಂಬರ್ 24 ರಂದು ಬೆಂಗಳೂರಿನಲ್ಲಿ ಜನಿಸಿದ ಅಕ್ಷರ ಗೌಡ, ಈಗ ಸಾಂಡಲ್​ವುಡ್ ಗಡಿ ದಾಡಿ ಮಿಂಚುತ್ತಿರುವುದು ​ಹೆಮ್ಮೆಯ ವಿಷಯವೇ. ಭಟ್ಟರ ‘ಪಂಚತಂತ್ರ‘ ಚಿತ್ರದಲ್ಲಿ ನಟಿಸಿ ಯುವಕರ ನಿದ್ದೆ ಗೆಡಿಸಿದ ನಟಿ ಅಕ್ಷರಾ ಗೌಡ ಇದೀಗ ಹಾಟ್​ ಫೋಟೋ​ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಗ್ಲಾಮರಸ್‌ ಮತ್ತು ಬೋಲ್ಡ್‌ ಹುಡುಗಿಯಾಗಿ ಮಿಂಚುತ್ತಿರುವ ಅಕ್ಷರಾ ಗೌಡ, ಸದ್ಯ ತಮಿಳಿನಲ್ಲಿ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

2012 ರಲ್ಲಿ ಬಿಡುಗಡೆಯಾದ ವಿಜಯ್ ಅಭಿನಯದ ತುಪ್ಪಾಕಿ ಸಿನಿಮಾದಲ್ಲಿ ಅಕ್ಷರ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದರು. ಇದೇ ಚಿತ್ರ ಕಾಲಿವುಡ್​ನಲ್ಲಿ ಹೆಚ್ಚು ಹೆಸರು ತಂದುಕೊಟ್ಟಿತು.
ಹಸಿಬಿಸಿ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕುವ ಮೂಲಕ ಮೂಲಕ ನಟಿ ಅಕ್ಷರಾ ಗೌಡ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಬೆಣ್ಣೆಯಿಂದ ತಿದ್ದಿ ತೀಡಿದಂತೆ ಕಾಣಿಸುವ ಅಕ್ಷರಾ ಗೌಡ ತಮ್ಮ ಗ್ಲಾಮರ್‌ನಿಂದ ಸೋಷಿಯಲ್‌ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಕೇವಲ ಬೆರಳೆಣಿಕೆಯಷ್ಟು ಸಿನಿಮಾ ಮಾಡಿ ಮಿಂಚಿ ಮರೆಯಾದ ಈ ಅಂದದ ಬೆಡಗಿ ಹೆಚ್ಚು ಗಮನ ಸೆಳೆದಿದ್ದು ಮಾತ್ರ ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ.
ಚಂದವನದ ‘ಪಂಚತಂತ್ರ’ ಚಿತ್ರ ಸೇರಿದಂತೆ ಅನ್ಯ ಭಾಷೆಯ ಸಿನಿಮಾಗಳಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡಿರುವ ಅಕ್ಷರಾ ಗೌಡ ಈಗ ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾಳೆ. ಸ್ಯಾಂಡಲ್​ವುಡ್​ ಅಷ್ಟೇ ಅಲ್ಲದೇ ನಾಗಾರ್ಜುನ ಅಭಿನಯದ ‘ಮನ್ಮಥುಡು 2’ ಸಿನಿಮಾ ಮೂಲಕ ತೆಲುಗು ಚಿತ್ರದಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಯುವಕರ ಗ್ಯಾಂಗ್​ಅನ್ನು ಹೆಚ್ಚಿಸಿಕೊಂಡರು.
Be the first to comment

Leave a Reply

Your email address will not be published. Required fields are marked *

Translate »
error: Content is protected !!