ಕನ್ನಡಿಗರ ಅಚ್ಚುಮೆಚ್ಚಿನ ವಾಹಿನಿ ಜೀ ಪಿಚ್ಚರ್ ಈ ಬಾರಿ ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇಯನ್ನು, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದೆ. ಪ್ರೀತಿಸುವವರಿಗೆ, ಪ್ರೀತಿಯ ಕುರಿತಾದ ಹಲವು ಪಾಠಗಳನ್ನು ಹೇಳಿದವರು ರವಿಚಂದ್ರನ್. ಒಂದು ತಲೆಮಾರನ್ನೇ ತಮ್ಮ ಹಾಡುಗಳಿಂದ ಮನ ತಣಿಸಿದವರು. ಪ್ರೀತಿ ಸ್ಕೂಲಿಗೆ ರವಿಚಂದ್ರನ್ ಅವ್ರೇ ಹೆಡ್ ಮೇಷ್ಟ್ರು. ಅವರು ಪ್ರೀತಿಯನ್ನ ವ್ಯಾಖ್ಯಾನಿಸುವ ವಿಧವು ಬೇರೆ, ಪರಿಯು ಬೇರೆ.
ಲವ್ ಸ್ಟೋರಿ ಅಂದ್ರೆ ರವಿಚಂದ್ರನ್ ಅನ್ನೋ ಅಷ್ಟರ ಮಟ್ಟಿಗೆ ಕನ್ನಡಿಗರಿಗೆ ಅವರ ಸಿನಿಮಾಗಳು ಇಷ್ಟವಾಗಿ ಹೋಗಿವೆ. ಇದೇ ಕಾರಣಕ್ಕೆ ಜೀ ಪಿಚ್ಚರ್, ಈ ಬಾರಿ ವ್ಯಾಲೆಂಟೈನ್ಸ್ ಡೇ ಪೂರ್ತಿ ದಿನ ರವಿಚಂದ್ರನ್ ಅವರ ವಿಶೇಷ ಚಲನಚಿತ್ರಗಳನ್ನು ನೋಡ್ತಾ ಪ್ರೇಮಿಗಳ ದಿನವನ್ನ ಸೆಲೆಬ್ರೇಟ್ ಮಾಡುವ ಅವಕಾಶವನ್ನು ತನ್ನ ವೀಕ್ಷಕರಿಗೆ ನೀಡುತ್ತಿದೆ.
ಬೆಳಿಗ್ಗೆ 7ಕ್ಕೆ ʻಉಸಿರೇʼ, ಬೆಳಗ್ಗೆ 10ಕ್ಕೆ ʻಪ್ರೀತ್ಸು ತಪ್ಪೇನಿಲ್ಲʼ, ಮಧ್ಯಾಹ್ನ 1ಕ್ಕೆ ʻಓ ಪ್ರೇಮವೇʼ, ಸಂಜೆ 4 ಗಂಟೆಗೆ ʻಯಾರೇ ನೀನು ಚೆಲುವೆʼ, ಸಂಜೆ 7ಕ್ಕೆ ʻಪ್ರೀತಿ ಮಾತು ವಿತ್ ರವಿಚಂದ್ರನ್ʼ ವಿಶೇಷ ಕಾರ್ಯಕ್ರಮ, ಸಂಜೆ 8ಕ್ಕೆ ʻಪುಟ್ನಂಜʼ ಮತ್ತು ರಾತ್ರಿ 11ಕ್ಕೆ ʻಹೂʼ ಪಿಚ್ಚರ್ಗಳು ವೀಕ್ಷಕರನ್ನು ರಂಜಿಸಲಿವೆ.
ಕಿರುತೆರೆಯಲ್ಲಿ ಮೊಟ್ಟಮೊದಲ ಬಾರಿಗೆ ರವಿಚಂದ್ರನ್ ಈ ಎಲ್ಲಾ ಸಿನಿಮಾಗಳ ನೆನಪುಗಳನ್ನು, ಆಫ್ ದಿ ರೆಕಾರ್ಡ್ ಕಥೆಗಳನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದ ಮಾಸ್ಟರ್ ಆಫ್ ಲವ್ ಎನಿಸಿರುವ ರವಿಮಾಮ ತಮ್ಮ ಚಲನಚಿತ್ರಗಳು, ಪ್ರೀತಿ, ತಲೆಮಾರುಗಳ ನಡುವೆ ಪ್ರೀತಿಯ ನಡುವಿನ ವ್ಯೆತ್ಯಾಸ ಇತ್ಯಾದಿಗಳ ಕುರಿತು ಸಂಜೆ 7ರ ಕಾರ್ಯಕ್ರಮ ʼಪ್ರೀತಿ ಮಾತು ವಿತ್ ರವಿಚಂದ್ರನ್ʼನಲ್ಲಿ ಮಾತನಾಡಲಿದ್ದಾರೆ. ತಮ್ಮ ಕುಟುಂಬದ ಕುರಿತು, ಪ್ರೇಮಿಗಳ ದಿನದಂದೇ ಸೆಲೆಬ್ರೇಟ್ ಮಾಡುವ ತಮ್ಮ ಮದುವೆ ಆನಿವರ್ಸರಿ ಸೇರಿದಂತೆ ಹಲವು ಕುತೂಹಲಕಾರಿ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.
ಕನ್ನಡ ಕಿರುತೆರೆಯಲ್ಲೇ ಮೊಟ್ಟಮೊದಲ ಪ್ರಯತ್ನವಾಗಿರುವ ಇದು ವೀಕ್ಷಕರನ್ನು ರಂಜಿಸುವುದರಲ್ಲಿ ಅನುಮಾನವೇ ಇಲ್ಲ. ಮೊದಲ ಬಾರಿಗೆ ತಮ್ಮ ನೆಚ್ಚಿನ ವೀಕ್ಷಕರ ಜೊತೆಗೆ ಮಾತನಾಡುತ್ತಾ, ಸಿನಿಮಾದ ಹಿಂದಿನ ಕಥೆಗಳನ್ನ ಹೇಳ್ತಾ, ಇಡೀ ದಿನ ತಮ್ಮ ಸಿನಿಮಾಗಳ ಜೊತೆಗೆ ರಂಜಿಸುತ್ತಾ, ಈ ಬಾರಿಯ ವ್ಯಾಲೆಂಟೈನ್ಸ್ ಡೇಯನ್ನು ಸ್ಪೆಷಲ್ ಮಾಡಲಿದ್ದಾರೆ. ವೀಕ್ಷಕರು ಈ ಬಾರಿಯ ಪ್ರೀತಿ ತುಂಬಿದ ವ್ಯಾಲೆಂಟೈನ್ ವೀಕೆಂಡ್ ಅನ್ನು ರವಿಮಾಮ ಹಾಗೂ ಜೀ ಪಿಚ್ಚರ್ ಜೊತೆ ಎಂಜಾಯ್ ಮಾಡಬಹುದು.
Be the first to comment