ಭಾರತದ ಅತ್ಯಂತ ಜನಪ್ರಿಯ ಕ್ವಿಜ್ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ಅಮಿತಾಭ್ ಬಚ್ಚನ್ ಕೇಳಿದ ಪ್ರಶ್ನೆಯಲ್ಲಿ ಯಶ್ ಅವರ ಹೆಸರು ಕೇಳಿ ಬಂದಿದೆ.
ದಕ್ಷಿಣ ಭಾರತದ ಸ್ಟಾರ್ ನಟರ ಬಿರುದುಗಳಿಗೆ ಸಂಬಂಧಿಸಿದ ಪ್ರಶ್ನೆಯಲ್ಲಿ, ‘ರಜನಿಕಾಂತ್ – ಸೂಪರ್, ಚಿರಂಜೀವಿ – ಮೆಗಾ, ಪವನ್ ಕಲ್ಯಾಣ್ – ಪವರ್, ಹಾಗಾದರೆ ಯಶ್?’ ಎಂದು ಸ್ಪರ್ಧಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ನೀಡಲಾದ ಆಯ್ಕೆಗಳ ಪೈಕಿ ‘ರಾಕಿಂಗ್ ಸ್ಟಾರ್’ ಎಂಬುದೇ ಸರಿಯಾದ ಉತ್ತರವಾಗಿತ್ತು. ಸ್ಪರ್ಧಿ ಸರಿಯಾದ ಉತ್ತರ ನೀಡುತ್ತಿದ್ದಂತೆ ಅಮಿತಾಭ್ ಬಚ್ಚನ್, ಯಶ್ ಅವರ ಸಾಧನೆಯನ್ನು ಮೆಚ್ಚಿ ಪ್ರಶಂಸಿಸಿದರು.
‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ಭಾರತದ ಪ್ರಮುಖ ಸೂಪರ್ಸ್ಟಾರ್ಗಳ ಸಾಲಿನಲ್ಲಿ ಯಶ್ ಹೆಸರು ಉಲ್ಲೇಖವಾಗಿರುವುದು ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ವಿಸ್ತರಿಸಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಕೆಜಿಎಫ್’ ಸರಣಿಯ ಅಭೂತಪೂರ್ವ ಯಶಸ್ಸಿನ ಬಳಿಕ ಯಶ್ ಜಾಗತಿಕ ಮಟ್ಟದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡಿದ್ದಾರೆ. ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟ್ರೇಲರ್ ದೇಶಾದ್ಯಂತ ಭಾರೀ ಮೆಚ್ಚುಗೆ ಗಳಿಸುತ್ತಿದ್ದು, ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲಿದೆ.
ಬಾಲಿವುಡ್ನ ಬೃಹತ್ ಸಿನಿಮಾ ‘ರಾಮಾಯಣ’ದಲ್ಲಿ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದು, ದೀಪಾವಳಿಗೆ ಸಿನಿಮಾ ಬಿಡುಗಡೆಯಾಗಲಿದೆ.
—-





Be the first to comment