ಅತಿ ದೊಡ್ಡ ಬಜೆಟ್ನ ಸಿನಿಮಾ ಎನಿಸಿಕೊಂಡ ‘ರಾಮಾಯಣ’ ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಯಶ್, ರಾವಣನ ಪಾತ್ರದಲ್ಲಿ ನಟಿಸಲು ಒಪ್ಪಿದ್ದೇಕೆ ಎಂದು ನಿರ್ದೇಶಕ ನಿತೀಶ್ ತಿವಾರಿ ಉತ್ತರ ನೀಡಿದ್ದಾರೆ.
‘ರಾವಣನದ್ದು ಬಹಳ ಸಂಕೀರ್ಣವಾದ ವ್ಯಕ್ತಿತ್ವ. ಆತನನ್ನು ಕೇವಲ ಒಬ್ಬ ‘ವಿಲನ್’ ಆಗಿ ನೋಡಲಾಗಿದೆ. ಆದರೆ ಆತ ಜ್ಞಾನವಂತನಾಗಿದ್ದ. ಸಂಗೀತಗಾರನಾಗಿದ್ದ. ವೈದ್ಯ ಜ್ಞಾನ ಪಾರಂಗತ, ಮಹಾನ್ ಶಿವಭಕ್ತನಾಗಿದ್ದ. ನಾವು ರಾವಣನನ್ನು ಒಬ್ಬ ದುಷ್ಟ ಎಂದು ಚಿತ್ರಿಸದೆ ಆತನ ಗುಣ-ಅವಗುಣ ಎರಡನ್ನು ತೋರಿಸಲಿದ್ದೇವೆ. ಇಂಥ ಪಾತ್ರ ಮಾಡಲು ದೊಡ್ಡ ಸ್ಟಾರ್ಡಮ್ ಮತ್ತು ಕಾನ್ಫಡೆನ್ಸ್ ಇರುವ ಯಶ್ ಅವರಿಂದಲೇ ಸಾಧ್ಯ’ ಎಂದಿದ್ದಾರೆ ನಿರ್ದೇಶಕ ನಿತೀಶ್ ತಿವಾರಿ.
‘ರಾವಣನ ಪಾತ್ರ ಸಂಕೀರ್ಣವಾಗಿರುವ ಕಾರಣ ಯಾರೆಂದರು ಅವರು ಆ ಪಾತ್ರದಲ್ಲಿ ನಟಿಸುವುದು ನನಗೆ ಇಷ್ಟವಿರಲಿಲ್ಲ. ನಾವು ರಾವಣನನ್ನು ತೋರಿಸುವ ರೀತಿ ಇಷ್ಟವಾಗಿ ಯಶ್ ಅವರು ಆ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಕತೆ ಕೇಳಿದ ಬಳಿಕ ಸ್ವತಃ ರಣ್ಬೀರ್ ಕಪೂರ್ ಅವರು ‘ನಾವು ನೋಡಿರುವ ‘ರಾಮಾಯಣ’ಗಳಲ್ಲಿಯೇ ಅತ್ಯಂತ ಭಿನ್ನವಾಗಿ ರಾವಣನ ಪಾತ್ರವನ್ನು ಈ ಸಿನಿಮಾನಲ್ಲಿ ಡಿಸೈನ್ ಮಾಡಲಾಗಿದೆ’ ಎಂದು ಮೆಚ್ಚಿಕೊಂಡಿದ್ದಾರೆ’ ಎಂದು ತಿವಾರಿ ಹೇಳಿದ್ದಾರೆ.
ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಿರುವುದು ಅಲ್ಲದೆ ಸಿನಿಮಾದ ಸಹ ನಿರ್ಮಾಪಕ ಆಗಿದ್ದಾರೆ. ಸಿನಿಮಾನಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ, ಕಾಜಲ್ ಅಗರ್ವಾಲ್ ಮಂಡೋದರಿಯಾಗಿ, ರವಿ ದುಬೆ ಲಕ್ಷ್ಮಣನಾಗಿ, ರಕುಲ್ ಪ್ರೀತ್ ಸಿಂಗ್ ಶೂರ್ಪಣಕಿ ಆಗಿ, ಲಾರಾ ದತ್ತ ಕೈಕೆಯಾಗಿ, ಕುನಾಲ್ ಕಪೂರ್ ಇಂದ್ರನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾಕ್ಕೆ ಆಸ್ಕರ್ ವಿಜೇತ ಎ ಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ. ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ.
—-





Be the first to comment