‘ವಿರಾಜ್’​​​​ಟೀಸರ್ ಬಿಡುಗಡೆ

ಈ ಸಿನಿಮಾ ಮೂಲಕ ವಿದ್ಯಾಭರಣ್​​ ಪೂರ್ಣ ಪ್ರಮಾಣದ ನಾಯಕನಾಗಿ ಪರಿಚಯ ಆಗುತ್ತಿದ್ದಾರೆ.ಚಿತ್ರೀಕರಣ ಪೂರ್ತಿಯಾಗಿದ್ದು ತೆಲುಗಿನಲ್ಲಿ ಸುಮಾರು ಏಳು ಸಿನಿಮಾಗಳನ್ನು ನಿರ್ದೇಶಿಸಿರುವ ನಾಗೇಶ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಟೀಸರನ್ನು ಉಪೇಂದ್ರ ಅವರು ಗುರುವಾರ ಬಿಡುಗಡೆ ಮಾಡಿದ್ದಾರೆ. ಎರಡು ಕುಟುಂಬಗಳ ನಡುವಿನ ಅಂತಸ್ತು ಪ್ರೀತಿಗೆ ಹೇಗೆ ಅಡ್ಡಿಯಾಗುತ್ತದೆ, ಅದನ್ನು ಎದುರಿಸಿ ಪ್ರೇಮಿಗಳು ಹೇಗೆ ಒಂದಾಗುತ್ತಾರೆ ಎಂಬುದೇ ಚಿತ್ರದ ಕಥಾವಸ್ತು.ದೇವರಾಜ್ ಈ ಸಿನಿಮಾದಲ್ಲಿ ನಾಯಕನ ತಾತನ ಪಾತ್ರ ಮಾಡಿದ್ದಾರೆ. ವಿನಯ ಪ್ರಕಾಶ್​, ಸ್ವಾತಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ನಿಖಿತ ಹಾಗೂ ಶಿರೀನ್ ಚಿತ್ರದ ನಾಯಕಿಯರು. ಸುಭಾಷ್ ಆನಂದ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ನವೆಂಬರ್ 9 ರಂದು ‘ವಿರಾಜ್’ ಸಿನಿಮಾ ಬಿಡುಗಡೆಯಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!