Usha Rathod : ಫ್ಯಾಷನ್ ಕ್ಷೇತ್ರದಲ್ಲಿ ಮಿಂಚುತ್ತಿರುವ ” ಉಷಾ ರಾಥೋಡ್ “

ಕಳೆದ ಏಳು ವರ್ಷಗಳಿಂದ ಫ್ಯಾಷನ್ ಕ್ಷೇತ್ರದಲ್ಲಿ ಉಷಾ ರಾಥೋಡ್ ಅವರು ಹಲವು ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಯು ಆರ್ ಫ್ಯಾಷನ್ ಇವೆಂಟ್ಸ್ ಮೂಲಕ ಉಷಾ ರಾಥೋಡ್ ಅವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 2023ರ ಜಾಗತಿಕ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಫ್ಯಾಷನ್ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಮಾಡಿದ್ದಾರೆ. 2016ರಲ್ಲಿ ಮಿಸ್ ಇಂಡಿಯಾ ಎಲೆಗೆಂಟ್ ನಲ್ಲಿ ಕೋರಿಯೋಗ್ರೋಫಿ, ಫ್ಯಾಷನ್ ಲೆಜೆಂಡ್ ಪ್ರಶಸ್ತಿ, 2017ರಲ್ಲಿ ಮಿಸ್ಟರ್ ಅಂಡ್ ಮಿಸ್ ಇಂಡಿಯಾ ಹಾಗೂ 2018 ರಲ್ಲಿ ಮಿಸೆಸ್ ಕರ್ನಾಟಕ ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿದ್ದರು.

2019ರಲ್ಲಿ ಮಿಸ್ಸೆಸ್ ಇಂಡಿಯಾ ಎಲಿಗೆಂಟ್ ಯುನಿವರ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡರು.

ಅತ್ತುತ್ತಮ ಸಾಧನೆಗಾಗಿ 2021 ರಲ್ಲಿ ಗೋಲ್ಡನ್ ವುಮೆನ್ಸ್ ಎಚಿವರ್ ಪ್ರಶಸ್ತಿ, ಬಿಜಿನೆಸ್ ಅಚೀವ್ಮೆಂಟ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು.

2022ರಿಂದ ಫಿಲಿಫೈನ್ಸ್ ನಲ್ಲಿ ನೆಲಸಿದ್ದು, ಸಾಕಷ್ಟು ಪ್ರಶಸ್ತಿಗಳನ್ನು ಫಿಲಿಫೈನ್ಸ್ನಲ್ಲಿ ಪಡೆದಿದ್ದಾರೆ.

2024ರ ಜನವರಿಯಲ್ಲಿ ನಡೆಯುತ್ತಿರುವ ಮಿಸಸ್ ಗ್ಲೋಬಲ್ ಎಷಿಯನ್ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲು ಕೊನೆ ಹಂತಕ್ಕೆ ತಲುಪಿದ್ದಾರೆ.

ಉಷಾ ರಾಥೋಡ್ ರವರ ಕನಸು ನನಸಾಗಲೆಂದು ಶುಭ ಹಾರೈಸುತ್ತೇವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!