ಭಾನುವಾರ ಜೀ ಕನ್ನಡದಲ್ಲಿ ‘ದಿ ಡೆವಿಲ್’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ  ಜೀ ಕನ್ನಡ ವಾಹಿನಿಯಲ್ಲಿ ಆಗಸ್ಟ್ 30ರಂದು ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ಚಿತ್ರಮಂದಿರ ಮತ್ತು ಒಟಿಟಿ ಬಳಿಕ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಪ್ರಕಾಶ್ ವೀರ್ ನಿರ್ದೇಶನದ ‘ದಿ ಡೆವಿಲ್’ ಸಿನಿಮಾ ರಾಜಕೀಯ ಹಿನ್ನೆಲೆಯ ಕಥೆಯನ್ನು ಒಳಗೊಂಡಿದೆ. ಅಧಿಕಾರ, ನಾಯಕತ್ವ ಮತ್ತು ವೈಯಕ್ತಿಕ ಜವಾಬ್ದಾರಿಗಳ ನಡುವೆ ನಡೆಯುವ ಸಂಘರ್ಷ ಚಿತ್ರದ ಪ್ರಮುಖ ಅಂಶವಾಗಿದೆ.  ದರ್ಶನ್‌ ಅವರು  ಚಿತ್ರದಲ್ಲಿ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಮುಖ್ಯಮಂತ್ರಿ ರಾಜಶೇಖರ್ ಅವರ ಪುತ್ರ ಧನುಷ್ ರಾಜಶೇಖರ್ ಮತ್ತು ಕೃಷ್ಣ ಎಂಬ ಎರಡು ಪಾತ್ರಗಳನ್ನು ದರ್ಶನ್‌ ನಿರ್ವಹಿಸಿದ್ದಾರೆ. . ಒಂದೇ ಮುಖ ಹೊಂದಿರುವ ಇಬ್ಬರ ಜೀವನ ಹೇಗೆ ಪರಸ್ಪರ ಜೋಡಿಸಿಕೊಳ್ಳುತ್ತದೆ ಎಂಬುದೇ ಚಿತ್ರದ ಕುತೂಹಲದ ಪ್ರಮುಖ ಅಂಶವಾಗಿದೆ.

ಚಿತ್ರದಲ್ಲಿ ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್,  ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದ ದರ್ಶನ್ ಅಭಿಮಾನಿಗಳು  ಜೀ ಕನ್ನಡ ವಾಹಿನಿಯ ಮೂಲಕ ‘ದಿ ಡೆವಿಲ್’  ನ್ನು ಮನೆಯಲ್ಲಿ ವೀಕ್ಷಿಸಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!