ನಿರ್ದೇಶಕಿ, ನಿರ್ಮಾಪಕಿಯಾಗಿ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿರುವ ರೂಪಾ ರಾವ್ ಅವರ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆಗೊಂಡಿದೆ.
‘ಭಯಂಕರ ಪ್ರೀತಿ’ ಎಂಬ ಈ ಶೀರ್ಷಿಕೆಯ ಮೂಲಕ ಚಿತ್ರದ ಕಥೆಯ ಭಿನ್ನ ಪಥದ ಸುಳಿವನ್ನೂ ರೂಪಾ ರಾವ್ ರವಾನಿಸಿದಂತಿದೆ. ರೂಪಾ ರಾವ್ . ಅವರು ಮತ್ತೊಂದು ಚಿತ್ರವನ್ನು ನಿರ್ದೇಶಿಸಲಿದ್ದಾರೆಂಬ ಬಗ್ಗೆ ಈ ಹಿಂದೆ ಸುದ್ದಿಯಾಗಿತ್ತು. ಈ ಬಾರಿ ಅವರು ಯಾವ ಕಥಾ ವಸ್ತುವನ್ನು ಕೈಗೆತ್ತಿಕೊಂಡಿರಬಹುದೆಂಬ ಕುತೂಹಲ ಮೂಡಿತ್ತು. ರೂಪಾ ರಾವ್ ಮತ್ತೊಂದು ಹೊಸ ಬಗೆಯ ಕಥಾನಕಕ್ಕೆ ದೃಶ್ಯರೂಪ ನೀಡುವ ಸಂಭ್ರಮದಲ್ಲಿದ್ದಾರೆ.
ತೇಜು ಬೆಳವಾಡಿ ಮತ್ತು ಪ್ರಣವ್ ಶ್ರೀಧರ್ ನಾಯಕ-ನಾಯಕಿಯರಾಗಿ ನಟಿಸುತ್ತಿದ್ದಾರೆ. ಅವರಿಬ್ಬರ ಪಾತ್ರಗಳ ಜೊತೆಗೆ ಟೈಟಲ್ ಮೋಷನ್ ಪೋಸ್ಟರ್ ನ್ನು ರೂಪಾ ರಾವ್ ರೂಪಿಸಿದ್ದಾರೆ. ‘ಭಯಂಕರ ಪ್ರೀತಿ’ ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್ನಡಿ ನಿರ್ಮಾಣಗೊಳ್ಳುತ್ತಿದೆ.
ಆಶಿತ್, ಅನನ್ಯಾ ಮೋಹನ್, ವಿನಯ್ ಭಾರದ್ವಾಜ್, ಶೀತಲ್ ರಾವ್, ಸುಧಾ ಪ್ರಸಾದ್, ಅನಘ, ಚಂದ್ರಶೇಖರ್, ಪೃಥ್ವಿ ಬನವಾಸಿ, ರಾಮ್ ಮಂಜೊನಾಥ್, ವಿಶಾಲ್, ವೈಭವ್ ಶೆಟ್ಟಿ, ಚೇತನ್, ನಿತಿನ್, ಗಗನಶ್ರೀ ಮುಂತಾದವರ ತಾರಾಗಣವಿದೆ.
ಪ್ರದೀಪ್ ನಾಯಕ್ ಸಂಕಲನ, ಶಿಬಿ ಶ್ರೀನಿವಾಸನ್ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಸಹದೇವ್ ಕೆಲವಡಿ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ.
ಈ ಹಿಂದೆ ‘ಗಂಟುಮೂಟೆ’ ಸಿನಿಮಾ ಮೂಲಕ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದ ರೂಪಾ ರಾವ್, ಆ ಬಳಿಕ ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ನಿರ್ಮಾಪಕಿಯಾಗಿ ಸದ್ದು ಮಾಡಿದ್ದರು.
—





Be the first to comment