‘ಸೋಜುಗದ ಕಸ್ತೂರಿ ಕನ್ನಡ’

ನಮ್ಮ ತಾಯಿಯಷ್ಟೇ ತಾಯಿನಾಡನ್ನು ಪ್ರೀತಿಸುವ ಕನ್ನಡಿಗರು‌ ನಾವು. ನವಂಬರ್ ೧ ನಮಗೆ‌‌ ದೊಡ್ಡ ಹಬ್ಬ . ಅದೇ ಕನ್ನಡ ರಾಜ್ಯೋತ್ಸವ.‌ಈ ಶುಭ ಸಂದರ್ಭದಲ್ಲಿ ಮ್ಯೂಸಿಕ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಜೆಂಕಾರ್ ಮ್ಯೂಸಿಕ್ ಸೋಜುಗದ ಕಸ್ತೂರಿ ಕನ್ನಡ ಎಂಬ ಸುಂದರ ಹಾಡನ್ನು ಬಿಡುಗಡೆ ಮಾಡಿದೆ ಜೆಂಕಾರ್ ಯೂಟ್ಯೂಬ್‌ ಚಾನಲ್ ನಲ್ಲಿ.

ಖ್ಯಾತ ಗಾಯಕ ಅಜಯ್ ವಾರಿಯರ್‌ ನಟಿಸಿ‌‌, ಹಾಡಿರುವ ಈ‌ ಹಾಡನ್ನು ಜಿಮ್ ಶಿವು ಬರೆದಿದ್ದಾರೆ. ‌ ಯುವರಾಜ್ ಸಂಗೀತ ನೀಡಿದ್ದಾರೆ. ನಿರ್ದೇಶನ ಹಾಗೂ ಸಂಕಲನದ ಜವಾಬ್ದಾರಿ ಮೋಹನ್ ಕಾಮಾಕ್ಷಿ ಅವರದು.

ಶ್ರೀರಂಗಪಟ್ಟಣದ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಈ‌ ಹಾಡನ್ನು ಸುನೀತ್ ಹಲಗೇರಿ ತಮ್ಮ ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಹಿಡಿದಿದ್ದಾರೆ. ಈಗಾಗಲೇ ‌ಬಿಡುಗಡೆಯಾಗಿರು ಈ ಹಾಡಿಗೆ ಒಳ್ಳೆಯ ಪ್ರಶಂಸೆ ದೊರಕಿದೆ. ಸದ್ಯದಲ್ಲೇ ಸಾಕಷ್ಟು ವಿಡಿಯೋ ಹಾಡುಗಳು ಜೆಂಕಾರ್ ಮ್ಯೂಸಿಕ್ ಮೂಲಕ ‌ಬಿಡುಗಡೆಯಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!