ಸೀತಾ ಪಯಣ

Movie Review : ಕೌಟುಂಬಿಕ ಕಥಾನಕ ‘ಸೀತಾ ಪಯಣ’

ಚಿತ್ರ : ಸೀತಾ ಪಯಣ
ನಿರ್ದೇಶನ : ನಿರ್ಮಾಣ: ಅರ್ಜುನ್ ಸರ್ಜಾ
ತಾರಾ ಬಳಗ : ನಿರಂಜನ್, ಐಶ್ವರ್ಯ ಅರ್ಜುನ್, ಸತ್ಯ ರಾಜ್, ಪ್ರಕಾಶ್ ರೈ, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಇತರರು
ರೇಟಿಂಗ್ : 3.5

ತಂದೆ – ಮಗಳ ಬಾಂಧವ್ಯ, ಜೀವನ ಮೌಲ್ಯದ ಜೊತೆಗೆ ಸ್ನೇಹ, ಪ್ರೀತಿಯ ಬಗ್ಗೆ ಮಾತನಾಡುವ ಈ ವಾರ ಬಿಡುಗಡೆ ಆಗಿರುವ ಕೌಟುಂಬಿಕ ಚಿತ್ರ ‘ ಸೀತಾ ಪಯಣ’.

ಚಿತ್ರದ ನಾಯಕಿ ಸೀತಾ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಬೆಳೆದವಳು. ಆದರೆ ಅವಳಿಗೆ ತಾಯಿ ಇಲ್ಲ. ಸೀತಾ ಅಡುಗೆ ಕೆಲಸದಲ್ಲಿ ತರಬೇತಿ ಪಡೆಯಲು ತಂಡದ ಜೊತೆ ಪ್ರಯಾಣಿಸುವಾಗ ಯುವಕ ಅಭಿಷೇಕ್ ನ ಪರಿಚಯ ಆಗುತ್ತದೆ. ಅವನೊಂದಿಗೆ ಅವಳು ಒಂದು ಷರತ್ತಿನೊಂದಿಗೆ ಪ್ರಯಾಣ ಬೆಳೆಸುತ್ತಾಳೆ. ಈ ನಡುವೆ ನಿಗೂಢ ಸತ್ಯದ ಅನಾವರಣ ಆಗುತ್ತದೆ. ಅದು ಏನು ಎಂದು ತಿಳಿಯಲು ಚಿತ್ರವನ್ನು ನೋಡಬೇಕಿದೆ.

ನಿರ್ದೇಶಕ ಅರ್ಜುನ್ ಸರ್ಜಾ ಅವರು ಕೌಟುಂಬಿಕ ಕಥಾ ವಸ್ತುವನ್ನು ಸಮರ್ಥವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಬದುಕಿನ ಮೌಲ್ಯ ಮತ್ತಿತ್ತರ ವಿಷಯಗಳನ್ನು ಮನಮುಟ್ಟುವಂತೆ ಅವರು ತೆರೆಯ ಮೇಲೆ ತಂದಿದ್ದಾರೆ.

ನಾಯಕಿಯಾಗಿ ಐಶ್ವರ್ಯ ಅರ್ಜುನ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕನ ಪಾತ್ರದಲ್ಲಿ ನಟಿಸಿರುವ ನಿರಂಜನ್ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಉಳಿದಂತೆ ಪೋಷಕ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ರೈ, ಸತ್ಯ ರಾಜ್, ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಸಿನಿಮಾದ ಕಥೆಗೆ ಪೂರಕವಾಗಿ ನಟಿಸಿದ್ದಾರೆ.

ಮನೆ ಮಂದಿಯಲ್ಲ ಒಟ್ಟಾಗಿ ಕುಳಿತು ನೋಡುವ ಚಿತ್ರವಾಗಿ ಸೀತಾ ಪಯಣ ಮೂಡಿ ಬಂದಿದೆ.

____

Be the first to comment

Leave a Reply

Your email address will not be published. Required fields are marked *

Translate »
error: Content is protected !!