ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿ ತಮ್ಮ ಛಾಪು ಮೂಡಿಸಿರುವ ಶ್ರುತಿ ಪ್ರಕಾಶ್, ವಿಕ್ರಮ್ ಭಟ್ ನಿರ್ದೇಶನದ ‘ಹಾಂಟೆಡ್ 2’ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಮಿಮೋಹ್ ಚಕ್ರವರ್ತಿ ಜೊತೆಗೆ ನಾಯಕಿಯಾಗಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಂಟೆಡ್ ಚಿತ್ರದ ಸೀಕ್ವೆಲ್ ಇದಾಗಿದೆ. ಬೆಳಗಾವಿ ಮೂಲದ, ಸದ್ಯ ಮುಂಬೈನಲ್ಲಿ ನೆಲೆಸಿರುವ ಶ್ರುತಿ ಪ್ರಕಾಶ್, ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
”ನಾನು ಯಾವಾಗಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೆ. ಅದೇ ವೇಳೇ ಬಾಲಿವುಡ್ ಕೂಡ ಸಮಾನವಾಗಿ ಆಕರ್ಷಿಸಿತ್ತು. ಇದೀಗ ಅದು ನಿಜವಾಗಿದೆ. ಭಟ್ ನಿರ್ದೇಶನದ ಚಿತ್ರದ ಭಾಗವಾಗುವುದು ಮಹತ್ವದ ಮೈಲಿಗಲ್ಲ. ಕಾಸ್ಟಿಂಗ್ ಏಜೆಂಟ್ ಮೂಲಕ ನಾನು ಈ ಅವಕಾಶವನ್ನು ಪಡೆದುಕೊಂಡೆ. 60 ಪ್ರೊಫೈಲ್‌ಗಳಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ನಂತರ ವಿಕ್ರಮ್ ಭಟ್ ಅವರನ್ನು ಭೇಟಿಯಾದೆ’ ಎಂದು ಶ್ರುತಿ ಹೇಳಿದ್ದಾರೆ.
ಹಾಂಟೆಡ್ 2 ನಲ್ಲಿ ಯಾಮಿನಿ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಕ್ರಮ್ ಭಟ್ ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದು ಅಮೂಲ್ಯವಾದ ಕಲಿಕೆಯ ಅನುಭವ ಎಂದು ಹೇಳಿದ್ದಾರೆ.
ಬೋಲ್ಡ್ ಕಂಟೆಂಟ್ ಹೊಂದಿರುವ ಭಟ್ ಅವರ ಚಲನಚಿತ್ರಗಳ ಹೊರತಾಗಿಯೂ, ಹಾಂಟೆಡ್ 2 ಫ್ಯಾಮಿಲಿ ಎಂಟರ್‌ಟೈನರ್ ಆಗಿರುತ್ತದೆ ಎಂದು ಶ್ರುತಿ ಪ್ರಕಾಶ್ ತಿಳಿಸಿದ್ದಾರೆ.
—-





Be the first to comment