ಶಶಾಂಕ್

ಆಶಿಕಾ ವಿರುದ್ಧ ಶಶಾಂಕ್ ಗರಂ

ಮೊಗ್ಗಿನ ಮನಸ್ಸು ಸಿನಿಮಾಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ತಪ್ಪಾಗಿ ಹೇಳಿಕೆ ನೀಡಿರುವ ನಟಿ ಆಶಿಕಾ ಬಗ್ಗೆ ನಿರ್ದೇಶಕ ಶಶಾಂಕ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂದರ್ಶನ ಒಂದರಲ್ಲಿ ಆಶಿಕಾ ಅವರು, ‘ ತನಗೆ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಆಹ್ವಾನ ಬಂದಿತ್ತು. ಆದರೆ ಸಂಭಾವನೆ ತುಂಬಾ ಕಡಿಮೆ ಎಂದು ಹೇಳಲಾಗಿತ್ತು. ಕಡಿಮೆ ಸಂಭಾವನೆಗೆ ನಟಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡರೆ ಸಂಭಾವನೆ ಜಾಸ್ತಿ ಕೊಡುತ್ತೇವೆ ಎನ್ನುವ ಮಾತು ಪ್ರೊಡಕ್ಷನ್ ಟೀಮ್ ಕಡೆಯಿಂದ ಬಂದಿತ್ತು ‘ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಬಗ್ಗೆ ಶಶಾಂಕ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಶಿಕಾ ಅವರು ನೀಡಿರುವ ಹೇಳಿಕೆ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

“ಅಶಿಕಾ ಅವರಿಗೆ ನಾಯಕಿಯ ಪಾತ್ರವನ್ನು ಆಫರ್ ಮಾಡಿರಲಿಲ್ಲ. ದೀಕ್ಷಾ ಎನ್ನುವ ಒಂದು ಪಾತ್ರ ಆಫರ್ ಮಾಡಲಾಗಿತ್ತು. ಆದರೆ ಸಂಭಾವನೆ ಕಡಿಮೆ ಎನ್ನುವ ಕಾರಣಕ್ಕಾಗಿ ಅಶಿಕಾ ಹಿಂದೆ ಸರಿದಿದ್ದರು. ಒಂದು ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಯ ವಿರುದ್ಧ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಅಂತ ಹೇಳಿಕೆಗಳು ತಪ್ಪು ಸಂದೇಶವನ್ನು ರವಾನೆ ಮಾಡುತ್ತವೆ” ಎಂದು ಅವರು ಹೇಳಿದ್ದಾರೆ.

ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಈ ಅಡ್ಜಸ್ಟ್ ಮೆಂಟ್ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!