ಸಾಯಿಬಾಬಾರ ಪರಮ ಭಕ್ತ ನಿರ್ದೇಶಕ ಸಾಯಿಪ್ರಕಾಶ್ ಅವರು ವಿಶ್ವ ಆತ್ಮಹತ್ಯೆ ದಿನಾಚರಣೆಯಾದ ಸೆಪ್ಟೆಂಬರ್ ೧೦ಅನ್ನೇ ತಮ್ಮ ಚಿತ್ರ ಶೀರ್ಷಿಕೆಯಾಗಿಟ್ಟುಕೊಂಡು ನಿರ್ದೇಶಿಸಿರುವ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭವನ್ನು ಮೊನ್ನೆ ಬಿಜಿಎಸ್ ಆಡಿಟೋರಂನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಸುಪ್ರೀಂ ಹೀರೋ ಶಶಿಕುಮಾರ್ ರೀ ಎಂಟ್ರಿ.
ಸೆಪ್ಟೆಂಬರ್ ೧೦ ಚಿತ್ರವು ನೈಜ ಕಥೆಯನ್ನು ಹೋಲುವಂತಿದ್ದು ಇದರಲ್ಲಿ ಆತ್ಮಹತ್ಯೆ ಮಾಡಿಕೊ್ಳುವವರ ಮನಸ್ಥಿತಿಯನ್ನು ತೋರ್ಪಡಿಸುವುದರ ಜೊತೆಗೆ ೭ ಘಟನೆಗಳನ್ನು ಪ್ರೇಕ್ಷಕರ ಮುಂದೆ ಹೇಳಲು ಸಾಯಿಪ್ರಕಾಶ್ ಹೊರಟಿದ್ದಾರೆ.
ಕ್ಯಾಪ್ಟನ್ ಜಿ.ಜಿ.ರಾವ್ ಅವರು ಬರೆದಿರುವ ತೆಲುಗಿನ ಕೃತಿಯನ್ನಾಧರಿಸಿದ ರೆಡಿಯಾಗಿರುವ ಸೆಪ್ಟೆಂಬರ್ ೧೦ ಚಿತ್ರದಲ್ಲಿ ವಿದ್ಯಾರ್ಥಿಗಳು, ಪ್ರೇಮಿಗಳು, ರೈತರು, ಕುಟುಂಬದ ಹೊರೆ ತಾಳಲಾಗದವರು, ಸಾಲದ ಸುಲಿಗೆ ಸಿಕ್ಕಿ ಒದ್ದಾಡುವವರು, ಮಕ್ಕಳಾಗದೆ ಸಮಾಜದಿಂದ ತಿರಸ್ಕೃತಗೊಂಡವರು ಆತ್ಮಹತ್ಯೆ ದಾರಿ ಹಿಡಿಯುವುದು ತಪ್ಪು ಎಂದು ಈ ಚಿತ್ರದಲ್ಲಿ ಹೇಳಲು ಹೊರಟಿದ್ದೇವೆ ಎಂದು ನಿರ್ಮಾಪಕ ಕಂ ನಿರ್ದೇಶಕ ಸಾಯಿಪ್ರಕಾಶ್ ಹೇಳಿದರು.
ಮೊನ್ನೆ ನಡೆದ ಮುಹೂರ್ತ ಸಮಾರಂಭದಲ್ಲಿ ಸರ್ವಧರ್ಮದ ಮಹತ್ವವನ್ನು ಸಾರುವಂತಿದ್ದು, ಶಶಿಕುಮಾರ್ ಅವರು ಮನಃಶಾಸಜ್ಞನ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಅವರ ದೃಷ್ಟಿಕೋನದಲ್ಲಿ ಕತೆ ಸಾಗುತ್ತದೆ.ಹಿಂದೂ ವಕೀಲನಾಗಿ ರಮೇಶ್ಭಟ್, ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿ ಸಿಹಿಕಹಿಚಂದ್ರು, ಕ್ರಿಶ್ಚಿಯನ್ ಆಗಿ ಶಿವಕುಮಾರ್, ಉದ್ಯಮಿಯಾಗಿ ಗಣೇಶ್ರಾವ್,
ಪೊಲೀಸ್ ಅಧಿಕಾರಿಯಾಗಿ ರವೀಂದ್ರನಾಥ್ ಹಾಗೂ ಇವರೊಂದಿಗೆ ಜಯಸಿಂಹ, ಆರಾಧ್ಯ, ಶ್ರೀನಿವಾಸ್ ವಿಜಯ್ ಅಭಿನಯಿಸಿದ್ದಾರೆ. ಶೃತಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವವರ ಮನಸ್ಸನ್ನು ಸೆಪ್ಟೆಂಬರ್ ೧೦ ಚಿತ್ರವು ಬದಲಾಯಿಸುವಂತಾಗಲಿ.
KU
Pingback: 1earthenware