ಗುರುನಂದನ್ ಈಗ ಜೆಮ್ಸ್ ಬಾಂಡ್

ರಿಯಲ್ ನೇಮ್ ನಿಂದ ಫೇಮ್ ಪಡೆದವರ ಮಧ್ಯೆ ನಿಕ್ ನೇಮ್ ನಿಂದಲೇ   ಸೂಪರ್ ಹಿಟ್ ಆದ ನಟ ರಾಜು ಅಲಿಯಾಸ್ ಗುರುನಂದನ್. ‘ಫಸ್ಟ್ ರ್ಯಾಂಕ್ ರಾಜು’ ಚಿತ್ರದ ಮೂಲಕ ರಾಜು ಅಂತಾನೇ ಫೇಮಸ್ ಆದ ನಟ ಈಗ ಮತ್ತೊಮ್ಮೆ ‘ರಾಜು ಜೇಮ್ಸ್ ಬಾಂಡ್ ಹೆಸರಿನಿಂದ ಕಮಾಲ್ ಮಾಡಲು ಬರುತ್ತಿದ್ದಾರೆ. ರಿಯಲ್ ನೇಮ್ನಿಂದ ಫೇಮ್ ಪಡೆದವರ ಮಧ್ಯೆ ನಿಕ್ನೇಮ್ನಿಂದಲೇ ಸೂಪರ್ ಹಿಟ್ ಆದ ನಟ ರಾಜು ಅಲಿಯಾಸ್ ಗುರುನಂದನ್. ‘ಫಸ್ಟ್ ರ್ಯಾಂಕ್ ರಾಜು’ ಚಿತ್ರದ ಮೂಲಕ ರಾಜು ಅಂತಾನೇ ಫೇಮಸ್ ಆದ ನಟ ಈಗ ಮತ್ತೊಮ್ಮೆ ಅದೇ ಹೆಸರಿನಿಂದ ಕಮಾಲ್ ಮಾಡಲು ಬರುತ್ತಿದ್ದಾರೆ. ಈ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿಕ್ಕಂದಿನಿಂದ ಡಾ.ರಾಜ್ ಚಿತ್ರವನ್ನು ನೋಡುತ್ತಲೇ ಬೆಳೆಯುವ ಹುಡುಗನ ಕಥೆಯೇ ಈ ‘ರಾಜು ಜೆಮ್ಸ್ ಬಾಂಡ್’ ಸಿನಿಮಾ ಪೆನ್ ಹಿಡಿಯೋ ಕೈಲಿ ಗನ್ ಏಕೆ ಹಿಡಿಯುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ.

ರಾಜುಗೆ ನಾಯಕಿಯಾಗಿ ಮೃದುಲಾ ನಟಿಸಿದ್ದು ಇವರೊಂದಿಗೆ ಸಾಧುಕೋಕಿಲ, ಜೈ ಜಗದೀಶ್, ಆರ್ಮುಗಂ ರವಿಶಂಕರ್,ಅಚ್ಯುತ್ ಕುಮಾರ್, ಚಿಕ್ಕಣ್ಣ, ತಬಲಾ ನಾಣಿ, ವಿಜಯ್ ಚೆಂಡೂರು ಸೇರಿದಂತೆ ಬಹುದೊಡ್ಡ ತಾರಾಬಳಗವೇ ನಟಿಸಿದೆ.

ಈ ಚಿತ್ರವನ್ನು ಕರ್ಮ ಬ್ರೋಸ್ ಪ್ರೊಡಕ್ಷನ್ ಬ್ಯಾನರ್ ಅಡಿ ಲಂಡನ್ ನಿವಾಸಿಗಳಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಗುರುನಂದನ್ ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿದ್ದು ಪಾತ್ರಕ್ಕಾಗಿ ಗೆಟಪ್ ಬದಲಿಸಿಕೊಂಡಿದ್ದಾರೆ.ಮನೋಹರ್ ಜೋಶಿ ಅವರ ಛಾಯಾಗ್ರಹಣವಿದ್ದು ಸಂಗೀತ ಅನೂಪ್ ಸೀಳಿನ್ ಮತ್ತು ಅಕ್ಷಯ್ ಪಿ. ರಾವ್ ಸಂಕಲನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!