ಸಧ್ಯದಲ್ಲೇ ತೆರೆಗೆ ‘ಗಡಿನಾಡು’

ಕರ್ನಾಟಕದ ಗಡಿಭಾಗವಾಗಿರುವ ಬೆಳಗಾವಿಯಲ್ಲಿ ಮೊದಲಿನಿಂದಲೂ ಭಾಷೆ, ಗಡಿ ಸಮಸ್ಯೆಗಳು ಜನರ ನಿದ್ದೆಗೆಡಿಸುತ್ತಲೇ ಬಂದಿದೆ, ಇದನ್ನು ಸರಿಪಡಿಸಲು ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ವಿಫಲವಾಗಿದೆ, ಆದರೆ ಇದಕ್ಕೆ ನಾವು ಪರಿಹಾರ ನೀಡುತ್ತೇವೆ ಎನ್ನುತ್ತಾರೆ ಗಡಿನಾಡು ಚಿತ್ರತಂಡ.

ಈ ಚಿತ್ರದಲ್ಲಿ ಗಡಿ ಸಮಸ್ಯೆ ಮಾತ್ರವಲ್ಲದೆ ನವಿರಾದ ಪ್ರೇಮಕಥೆಯನ್ನು ಹೆಣೆದಿದ್ದಾರೆ ನಿರ್ದೇಶಕ ನಾಗ್ ಹುಣಸೋಡ್. ಗಡಿನಾಡು ಚಿತ್ರವು ಈ ತಿಂಗಳ ೨೪ ರಂದು ತೆರೆಗೆ ಅಪ್ಪಳಿಸುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣವನ್ನು ಚಿಕ್ಕೋಡಿ, ಅಥಣಿ, ಬೆಳಗಾವಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ದೊಡ್ಡ ಮಟ್ಟದ ವಿದ್ಯಾಭ್ಯಾಸ ಮಾಡಿ ತಮ್ಮ ಊರಿಗೆ ಬರುವ ನಾಯಕ ಅಲ್ಲಿನ ಸಮಸ್ಯೆಗಳನ್ನು ಕಂಡು ಅದನ್ನು ಹೋರಾಟದ ಮೂಲಕ ಪರಿಹರಿಸಲು ಗಡಿಸೇನೆಯನ್ನು ಕಟ್ಟುತ್ತಾನೆ, ಈ ನಡುವೆ ಆತನ ಬಾಳಿಗೆ ನಾಯಕಿಯ ಪ್ರವೇಶವಾಗುತ್ತೆ, ನಂತರ ನಾಯಕ ತಾನೊಂದುಕೊಡತೆ ಗಡಿ ಸಮಸ್ಯೆಯನ್ನು ಪರಿಹರಿಸುತ್ತಾನೆಯೇ ಎಂಬುದೇ ಗಡಿನಾಡ ಚಿತ್ರದ ಒನ್ಲೈನ್ ಸ್ಟೋರಿ. ಈ ಚಿತ್ರದಲ್ಲಿ ಮಹಾಜನ್ ವದಿಯನ್ನು ಬಿಂಬಿಸಿದ್ದಾರೆ, ಅಲುಗಾಡದ ಬಂಡೆ ಎಂಬ ಉಪಶೀರ್ಷಿಕೆಯೂ ಕ್ಯಾಚಿಯಾಗಿದೆ.

ಬೆಳಗಾವಿಯ ವಸಂತ್ ಮುರಾರಿ ದಳವಾಯಿ ಅವರು ಅಕ್ಷಯ್ ಫಿಲ್ಮ್ ಮೇಕರ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ಈಗಾಗಲೇ ಸೆನ್ಸಾರ್ನಿಂದ ಯು/ಎ ಪ್ರಮಾಣ ಪತ್ರ ಪಡೆದಿರುವ ಈ ಚಿತ್ರ ಜನವರಿ ೨೪ರಂದು ರಾಜ್ಯಾದ್ಯಂತ ಸುಮಾರು ೧೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

ಪ್ರಭು ಸೂರ್ಯ ಈ ಚಿತ್ರದ ನಾಯಕ, ಮರಾಠಿ ಹುಡುಗಿಯಾಗಿ ಸಂಚಿತಾ ಪಡುಕೋಣೆ ನಟಿಸಿದ್ದಾರೆ. ಹಿರಿಯನಟ ಚರಣ್ರಾಜ್ ಕಥೆಗೆ ಟ್ವಿಸ್ಟ್ ಕೊಡುವಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೋಭರಾಜ್, ದೀಪಕ್ ಶೆಟ್ಟಿ ಮತ್ತು ರಘುರಾಜು ಮೂವರು ಖಳನಾಯಕರುಗಳಾಗಿ ನಟಿಸಿರುವುದು ಚಿತ್ರದ ಮತ್ತೊಂದು ವಿಶೇಷ. ಉಳಿದಂತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಘು ಸೀರುಂಡೆ, ಮಮತ, ಪುಷ್ಟ ಮುಂತಾದವರು ಸಹ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಿರ್ಮಾಪಕ ವಸಂತ್ ಮುರಾರಿ ದಳವಾಯಿ ಮಾತನಾಡಿ, ಕೆಲವು ನೈಜ ಘಟನೆಯನ್ನು ಆಧಾರಿಸಿ ತಯಾರಾಗಿರುವ ಈ ಚಿತ್ರದಲ್ಲಿ ಗಡಿಭಾಗದ ಸಮಸ್ಯೆಯೂ ಮುಖ್ಯವಾಗಿದೆ ಎಂದು ಹೇಳಿದರು.ನಾಯಕ ಪ್ರಭಯ ಸೂರ್ಯ, ನಾಯಕಿ ಸಂಚಿತಾ ಪಡುಕೋಣೆ ತಮ್ಮ ಪಾತ್ರಗಳ ಕುರಿತಂತೆ ಹೇಳಿಕೊಂಡರು.

ಶಿವಮೊಗ್ಗ ಮೂಲದ ನಾಗ್ ಹುಣಸೋಡು ಅವರು ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ಕಟ್ ಹೇಳಿದ್ದಾರೆ. ಈ ಚಿತ್ರದ ನಾಲ್ಕು ಹಾಡುಗಳಿಗೆ ಎಲ್ವಿನ್ ಜೋಶ್ವಾ ಅವರ ಸಂಗೀತ ಸಂಯೋಜನೆಯಿದೆ. ಕನ್ನಡ ಭಾಷೆಯ ಮಹತ್ವ ಸಾರುವ ಗೀತೆಗೆ ಸಂತೋಷ್ ನಾಯಕ್ ಅವರ ಸಾಹಿತ್ಯವಿದ್ದು, ರಘು ದೀಕ್ಷಿತ್ ಹಾಡಿದ್ದಾರೆ.

ನಾಲ್ಕು ಸಾಹಸ ದೃಷ್ಯಗಳನ್ನು ಥ್ರಿಲ್ಲರ್ ಮಂಜು-ಡಿಫರೆAಟ್ ಡ್ಯಾನಿ ಕಂಪೋಜ್ ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ಗೌರಿ ವೆಂಕಟೇಶ್ ಹಾಗೂ ರವಿ ಸುವರ್ಣ ಛಾಯಾಗ್ರಹಣ ಮಾಡಿದ್ದಾರೆ. ಗಡಿನಾಡು ಚಿತ್ರದ ಮೂಲಕವಾದರೂ ಬೆಳಗಾವಿಯ ಸಮಸ್ಯೆ ಪರಿಹಾರವಾಗುವಂತಾಗಲಿ.

This Article Has 1 Comment
  1. Pingback: http://www.laguqqid.club/

Leave a Reply

Your email address will not be published. Required fields are marked *

Translate »
error: Content is protected !!