ಮತ್ತೆ ಜೊತೆಯಾದ ನಿರೂಪ್, ಸಾಯಿಕುಮಾರ್!

‘ರಂಗಿತರಂಗ’ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ ಸಾಯಿಕುಮಾರ್‌ ಹಾಗೂ ನಾಯಕನಾಗಿ ನಟಿಸಿದ್ದ ನಿರೂಪ್‌ ಭಂಡಾರಿ ಹೊಸ ಪ್ರಾಜೆಕ್ಟ್‌ ಒಂದರಲ್ಲಿ ತಂದೆ-ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಚಿನ್ ವಾಲಿ ಸಾರಥ್ಯದ ಸಿನಿಮಾದಲ್ಲಿ ನಿರೂಪ್ ಹಾಗೂ ಸಾಯಿಕುಮಾರ್ 9 ವರ್ಷಗಳ ಬಳಿಕ ಮತ್ತೆ  ಜೊತೆಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಚಿತ್ರದ ಶೀರ್ಷಿಕೆ ಮತ್ತು ಫಸ್ಟ್‌ಲುಕ್‌ ಫೆ.6ಕ್ಕೆ ಅನಾವರಣಗೊಳ್ಳುತ್ತಿದೆ.

ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.  ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿಮಿಂಚಿದ ಬೃಂದಾ, ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಇದೇ ಚಿತ್ರದಲ್ಲಿ ನಟಿ ಅಂಕಿತಾ ಅಮರ್‌ ವರದಿಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

 ಅಂಕಿತ್ ಸೋನಿಗಾರ ಈ ಚಿತ್ರ ನಿರ್ಮಿಸಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ಸಂದೀಪ್ ವಲ್ಲೂರಿ ಛಾಯಾಚಿತ್ರಗ್ರಹಣ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ  ಚಿತ್ರಕ್ಕಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!