ಕಾರವಾರದ ಶಾಸಕ ಸತೀಶ್ ಸ್ಮೈಲ್ ಅವರ ಪುತ್ರಿ ಸಾದ್ವಿ ಸತೀಶ್ ಸೈಲ್ ಮಿಸ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸಿಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ ನಡೆದ 61ನೇ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಗೋವಾವನ್ನು ಪ್ರತಿನಿಧಿಸಿದ್ದ ಸಾದ್ವಿ ಸತೀಶ್ ಸೈಲ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ.
ಸಾದ್ವಿ ಸತೀಶ್ ಸೈಲ್ ಅವರು ಬೆಳ್ಳಿ-ಟೋನ್ಡ್ ಮೆಟಾಲಿಕ್ ಒಳಗೊಂಡ ಬಿಳಿ ಹಾಗೂ ಕಪ್ಪು ಬಣ್ಣದ ಗೌನ್ ಧರಿಸಿದ್ದರು. ಸ್ಲೀವ್ ಲೆಸ್ ಗೌನ್ ಹಾಕಿದ್ದರು. ಕುತ್ತಿಗೆಗೆ ನೆಕ್ಲೆಸ್ ಧರಿಸಿ ಗಮನ ಸೆಳೆದರು.
61ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ 3 ಸ್ಪರ್ಧಿಗಳು ಅರ್ಹತೆ ಪಡೆದಿದ್ದರು. ಅಂತಿಮವಾಗಿ ಸಾದ್ವಿ ಸತೀಶ್ ಸೈಲ್ ವಿಜೇತರಾದರು. ಇವರು ಮಾಡೆಲ್. ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕಳೆದ ಆವೃತ್ತಿಯ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ನಿಕಿತಾ ಪೋರ್ವಾಲ್ ಅವರು ಫೆಮಿನಾ ಮಿಸ್ ಇಂಡಿಯಾ ಕಿರೀಟ ಧರಿಸಿದ್ದರು. ಸದ್ಯ ಅವರು 2027ರ ಮಿಸ್ ವರ್ಲ್ಡ್ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.





Be the first to comment