ಹೊಂಬಾಳೆ ಫಿಲಮ್ಸ್ ಕಳೆದ ಬಾರಿ ‘ಮಹಾವತಾರ ನರಸಿಂಹ’ ಅನಿಮೇಟೆಡ್ ಸಿನಿಮಾವನ್ನು ಪ್ರಸ್ತುತಪಡಿಸಿ ಯಶಸ್ಸು ಕಂಡ ಬಳಿಕ ‘ಮಹಾವತಾರ’ ಸರಣಿಯ ಮುಂದಿನ ಭಾಗವಾದ ‘ಮಹಾವತಾರ ಪರಶುರಾಮ’ ಸಿನಿಮಾವನ್ನು ಘೋಷಿಸಿದೆ. ಈ ಬಾರಿ ಹೊಂಬಾಳೆ ಕೇವಲ ಪ್ರೆಸೆಂಟ್ ಮಾಡದೆ ನಿರ್ಮಾಣ ಕೂಡಾ ಮಾಡುತ್ತಿದೆ.
ಪೌರಾಣಿಕ ಪಾತ್ರವಾದ ಪರಶುರಾಮನ ಕಥೆಯನ್ನು ಆಧರಿಸಿದ ಈ ಸಿನಿಮಾ ಮುಂದಿನ ವರ್ಷದ ಡಿಸೆಂಬರ್ನಲ್ಲಿ ಬಿಡುಗಡೆಯಾಗಲಿದೆ.
ಚಿತ್ರವನ್ನು ಅಶ್ವಿನ್ ಕುಮಾರ್ ನಿರ್ದೇಶಿಸಲಿದ್ದಾರೆ. ‘ಕ್ಲೀಮ್ ಪ್ರೊಡಕ್ಷನ್ಸ್’ ಜೊತೆಗೂಡಿ ವಿಜಯ್ ಕಿರಗಂದೂರು ಹಾಗೂ ಶಿಲ್ಪಾ ಧವನ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ವಿಷ್ಣುವಿನ ವಿವಿಧ ಅವತಾರಗಳನ್ನು ಆಧರಿಸಿದ ಈ ಮಹತ್ವಾಕಾಂಕ್ಷಿ ಸರಣಿಯಲ್ಲಿ ಮುಂದಿನ ದಿನಗಳಲ್ಲಿ ‘ಮಹಾವತಾರ ರಘುರಾಮ’, ‘ದ್ವಾರಕಾದೀಶ’, ‘ಗೋಕುಲನಂದ’ ಹಾಗೂ ‘ಕಲ್ಕಿ’ ಭಾಗಗಳು ತೆರೆಗೆ ಬರಲಿವೆ ಎಂದು ಚಿತ್ರತಂಡ ತಿಳಿಸಿದೆ.
‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ಮೊದಲಾದ ಬ್ಲಾಕ್ಬಸ್ಟರ್ ಕಮರ್ಷಿಯಲ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲಮ್ಸ್ ಈಗ ಪೌರಾಣಿಕ ಕಥೆಗಳ ಸಿನಿಮಾದ ಕಡೆಗೆ ಹೆಚ್ಚಿನ ಗಮನ ನೀಡಿದೆ.





Be the first to comment