‘S/o ಮುತ್ತಣ್ಣ’ ಫಸ್ಟ್ ಲುಕ್ ಬಿಡುಗಡೆ

ಪ್ರಣಮ್ ದೇವರಾಜ್ ನಟನೆಯ ‘S/o ಮುತ್ತಣ್ಣ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಯಂಗ್ ಡೈನಾಮಿಕ್ ಪ್ರಣಮ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ, S/o ಮುತ್ತಣ್ಣ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಈ ವೇಳೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಪ್ರಣಮ್ ದೇವರಾಜ್ ಮಾತನಾಡಿ, ಶ್ರೀಕಾಂತ್ ಸರ್ ಫಸ್ಟ್ ಟೈಮ್ ಮನೆಗೆ ಬಂದಾಗ ಅವರು ಮಾತನಾಡಿದ ರೀತಿ ಕಥೆ ಹೇಳಿದ ರೀತಿಯಲ್ಲಿ ನಂಬಿಕೆ ಬಂತು. ಪ್ರಾಮಿಸ್ ಮಾಡಿದಕ್ಕಿಂತ ಸಖತ್ ಆಗಿ ಸಿನಿಮಾ ತೆಗೆದಿದ್ದಾರೆ. ಖುಷಿ ರವಿ ಅವರು ಎಂಥ ನಟಿ ಅನ್ನೋದು ‘ದಿಯಾ’ದಿಂದ ಗೊತ್ತಾಗಿದೆ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ನಾಯಕಿ ಖುಷಿ ರವಿ ಮಾತನಾಡಿ, S/o ಮುತ್ತಣ್ಣ ಅಂತ ಹೇಳಿದ ತಕ್ಷಣ ಪಾಸಿಟಿವ್ ವೈಬ್ಸ್ ಬರುತ್ತದೆ. ಟೈಟಲ್ ತುಂಬಾ ಪವರ್ ಫುಲ್ ಆಗಿದೆ. ಟೈಟಲ್ ಕೇಳಿಯೇ ಸಿನಿಮಾ ಒಪ್ಪಿಕೊಂಡೆ. ನಾನು ಈ ಸಿನಿಮಾದ ಭಾಗವಾಗಿರುವುದಕ್ಕೆ ಖುಷಿ ಕೊಟ್ಟಿದೆ. ರಂಗಾಯಣ ರಘು ಸರ್ ಕ್ಯಾಮೆರಾ ಹೇಗೆ ಫೇಸ್ ಮಾಡಬೇಕು ಅನ್ನೋದನ್ನು ಹೇಳಿ ಕೊಟ್ಟರು. ಪ್ರಣಮ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಎಂದರು.

S/o ಮುತ್ತಣ್ಣ ನಿರ್ಮಾಪಕ ಶಾಂತ ಮೂರ್ತಿ ಮಾತನಾಡಿ, ಕಥೆ ಬಗ್ಗೆ ತುಂಬಾ ಚರ್ಚೆ ಮಾಡಿ ಈ ಸಿನಿಮಾ ಮಾಡಿದ್ದೇವೆ. ಪ್ರಣಮ್ ಗೆ ಇದೇ ಕಥೆ ಮಾಡಬೇಕೆಂದು ಸಿನಿಮಾ ಮಾಡಿದ್ದೇವೆ. ಮೇಕಿಂಗ್ ನಾವು ಅಂದುಕೊಂಡಂತೆ ಬಂದಿದೆ ಎಂದರು.

ಶ್ರೀಕಾಂತ್ ಹುಣಸೂರ್ ನಿರ್ದೇಶನದ ಈ ಚಿತ್ರಕ್ಕೆ ಪುರಾತನ ಫಿಲಂಸ್ ಲಾಂಛನದಲ್ಲಿ ಶಾಂತ ಮೂರ್ತಿ ಬಂಡವಾಳ ಹೂಡಿದ್ದಾರೆ. ಸಚಿನ್ ಬಸರೂರು ಸಂಗೀತ, ಹರೀಶ್ ಕೊಮ್ಮೆ ಸಂಕಲನ, ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣವಿದೆ.

ಸುಧಾ ಬೆಳವಾಡಿ, ರಂಗಾಯಣ ರಘು, ತಬಲ ನಾಣಿ, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ಶ್ರೀನಿವಾಸ್ ಪ್ರಭು, ಅರುಣ್ ಚಕ್ರವರ್ತಿ ನಟಿಸಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!