ಸೂಪರ್ ಹಿಟ್ ಚಿತ್ರ ಕಾಂತಾರದಲ್ಲಿ ನಟಿಸುವ ಆಸಕ್ತಿ ಇರಲಿಲ್ಲ ಎಂದು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ.
ಐಎನ್ಸಿಎ 2026 ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ರಿಷಬ್ ಅವರು, ‘ಕಾಂತಾರ’ದಲ್ಲಿ ನಟಿಸುವ ಉದ್ದೇಶ ಇರಲಿಲ್ಲ. ಕಥೆ ಬರೆಯುವಾಗ ನಾನು ಕೇವಲ ನಿರ್ದೇಶನದ ಮೇಲೆ ಗಮನ ಹರಿಸಬೇಕೆಂದುಕೊಂಡಿದ್ದೆ. ನನ್ನ ನಿರ್ದೇಶನದ ಸಿನಿಮಾಗಳಲ್ಲಿ ನಾನು ಸಾಮಾನ್ಯವಾಗಿ ನಟಿಸದೆ ಇದ್ದೆ ಅಥವಾ ಸಣ್ಣ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.
“ಶಿವ ಪಾತ್ರ ನಿಮಗೆ ಸೂಕ್ತ ಎಂದು ಪತ್ನಿ ಪ್ರಗತಿ ಶೆಟ್ಟಿ ಅವರು ಒತ್ತಾಯಿಸಿ ನನಗೆ ಧೈರ್ಯ ತುಂಬಿದರು. ಅವರ ಪ್ರೇರಣೆಯಿಂದ ನಾನು ಆ ಪಾತ್ರವನ್ನು ಒಪ್ಪಿಕೊಂಡೆ ಎಂದು ಅವರು ಹೇಳಿದ್ದಾರೆ.
‘ಕಾಂತಾರ’ ಮತ್ತು ‘ಕಾಂತಾರ 1’ ಸಿನಿಮಾಗಳು ಕೇವಲ ನನ್ನ ಯಶಸ್ಸಲ್ಲ. ಇದು ಸಂಪೂರ್ಣವಾಗಿ ಚಿತ್ರತಂಡದ ಶ್ರಮದ ಫಲ ಎಂದು ಅಭಿಪ್ರಾಯ ಪಟ್ಟರು.
ಕಾಂತಾರ ಸಿನಿಮಾಗಳ ಯಶಸ್ಸಿನಿಂದ ನಮ್ಮ ಊರು ಕೆರಾಡಿ ‘ಫಿಲಂ ವಿಲೇಜ್’ ಆಗಿ ಮಾರ್ಪಟ್ಟಿದೆ. ಅಲ್ಲಿ ದಿನವೂ ಈಗ ಅನೇಕ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.





Be the first to comment