ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾಗಾಗಿ ಅವರಿಗೆ ಆಸ್ಟ್ರೇಲಿಯಾದಲ್ಲಿ ನಡೆದ 17ನೇ ಆವೃತ್ತಿಯ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್’ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಲಭಿಸಿದೆ.
ಇದರ ಜತೆಗೆ ಭಾರತೀಯ ಸಿನಿಮಾಗೆ ನೀಡಿರುವ ವಿಶಿಷ್ಟ ಕೊಡುಗೆ ಹಾಗೂ ಭಾರತೀಯ ಸಾಂಸ್ಕೃತಿಕ ಕಥನಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸಿರುವುದನ್ನು ಗುರುತಿಸಿ ‘ಲೀಡರ್ಶಿಪ್ ಇನ್ ಸಿನಿಮಾ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಭಾರತೀಯ ಚಿತ್ರರಂಗದ ಹಿರಿಯ ನಟಿ ರೇಖಾ ಅವರಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟ ಪಂಕಜ್ ತ್ರಿಪಾಠಿ ಅವರಿಗೆ ‘ಆರ್ಟಿಸ್ಟ್ ಆಫ್ ಡಿಸ್ಟಿಂಕ್ಷನ್’ ಗೌರವ ದೊರೆತಿದೆ.
- ಅತ್ಯುತ್ತಮ ಸಿನಿಮಾ: ‘ಲೋಕಾ ಚಾಪ್ಟರ್ 1: ಚಂದ್ರ’
- ಅತ್ಯುತ್ತಮ ಸಿನಿಮಾ – ವಿಶೇಷ ಉಲ್ಲೇಖ: ‘ದಿ ಗ್ರೇಟ್ ಶಂಸುದ್ದೀನ್ ಫ್ಯಾಮಿಲಿ’
- ಅತ್ಯುತ್ತಮ ಇಂಡಿ ಸಿನಿಮಾ: ‘ನಾಟ್ ಎ ಹೀರೊ’
- ಇಂಡಿ ಸಿನಿಮಾ – ವಿಶೇಷ ಉಲ್ಲೇಖ: ‘ಕಿಕ್ಕ್ರನ್ ದೇ ಫುಲ್’
- ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ – ‘ಕಾಂತಾರ: ಚಾಪ್ಟರ್ 1’
- ಅತ್ಯುತ್ತಮ ನಟ: ದುಲ್ಕರ್ ಸಲ್ಮಾನ್ – ‘ಕಾಂತಾ’
- ಅತ್ಯುತ್ತಮ ನಟಿ: ಕೀರ್ತಿ ಕುಲ್ಹಾರಿ – ‘ಫುಲ್ ಪ್ಲೇಟ್’
- ಅತ್ಯುತ್ತಮ ಸಾಕ್ಷ್ಯಚಿತ್ರ: ‘ಫ್ಲೈಯಿಂಗ್ ಟೈಗರ್ಸ್’ – ಮಧುಶ್ರೀ ದತ್ತಾ
- ಪೀಪಲ್ಸ್ ಚಾಯ್ಸ್ ಪ್ರಶಸ್ತಿ: ‘ಸೈಯಾರಾ’ – ಹಿಂದಿ
- ರೈನ್ಬೋ ಸ್ಟೋರಿಟೆಲ್ಲರ್ ಪ್ರಶಸ್ತಿ: ‘ಲಾಲಾ ಅಂಡ್ ಪಾಪಿ’
ವೆಬ್ ಸರಣಿ ವಿಭಾಗ
ವೆಬ್ ಸರಣಿ ವಿಭಾಗದಲ್ಲೂ ಪ್ರಮುಖ ಕಲಾವಿದರು ಪ್ರಶಸ್ತಿ ಗೆದ್ದಿದ್ದಾರೆ.
- ಅತ್ಯುತ್ತಮ ನಟ: ವಿಜಯ್ ವರ್ಮಾ – ‘ಮಟ್ಕಾ ಕಿಂಗ್’
- ಅತ್ಯುತ್ತಮ ನಟಿ: ರಸಿಕಾ ದುಗ್ಗಲ್ – ‘ದೆಹಲಿ ಕ್ರೈಮ್’ ಸೀಸನ್ 3
- ಅತ್ಯುತ್ತಮ ಸರಣಿ: ‘ಫ್ರೀಡಮ್ ಅಟ್ ಮಿಡ್ನೈಟ್’ – ಸೀಸನ್





Be the first to comment