ಇದು ಭಾರತೀಯ ಸಿನಿರಂಗದ ಪಾಲಿಗೆ ಒಂದು ಐತಿಹಾಸಿಕ ಕ್ಷಣ ಹಾಗೂ ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆಯ ವಿಷಯ. ಭಾರತೀಯ ಚಿತ್ರರಂಗದಲ್ಲಿ ಎಂದೂ ಕಂಡರಿಯದ, ಮುಟ್ಟದ ಎತ್ತರದಲ್ಲಿ ನಮ್ಮದೇ ಆದ ‘ರಾಮಾಯಣ’ ಮಹಾಕಾವ್ಯವು ಈಗ ವಿಶ್ವಮಟ್ಟದಲ್ಲಿ ಸಿದ್ಧಗೊಂಡಿದೆ. ಇದು ಹಾಲಿವುಡ್ ಚಿತ್ರಗಳಿಗೂ ಸವಾಲು ಒಡ್ಡುವಂತಹ ಬೃಹತ್ ಪ್ರಮಾಣದ ದೃಶ್ಯ ವೈಭವವನ್ನು ಹೊಂದಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಅಂತರರಾಷ್ಟ್ರೀಯ ಮಟ್ಟದ ಟ್ರೇಲರ್ ಚಿತ್ರದ ದೃಷ್ಟಿಕೋನ ಮತ್ತು ಅದ್ಧೂರಿತನವನ್ನು ಜಗತ್ತಿಗೆ ಸಾರಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಭಾರತೀಯ ಸಿನಿಮಾದ ಸಾಮರ್ಥ್ಯ ಏನು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಈ ಬರುವ ದೀಪಾವಳಿಯಂದು ಅಂದರೆ ನವೆಂಬರ್ 5 ರಂದು, ಇಡೀ ವಿಶ್ವವೇ ಒಂದು ಅಸಾಧಾರಣ ಸಿನೆಮಾ ಅನುಭವಕ್ಕೆ ಸಾಕ್ಷಿಯಾಗಲಿದೆ. ಇಲ್ಲಿಂದ ಮುಂದಕ್ಕೆ ಭಾರತೀಯ ಚಿತ್ರರಂಗದ ಮಟ್ಟ ಮತ್ತಷ್ಟು ಎತ್ತರಕ್ಕೆ ಏರಲಿದೆ.
ಈ ಚಿತ್ರದ ಮತ್ತೊಂದು ವಿಶೇಷ ಆಕರ್ಷಣೆಯೆಂದರೆ ಇದು ಅತ್ಯಾಧುನಿಕ 3D ತಂತ್ರಜ್ಞಾನದಲ್ಲಿ ಮೂಡಿಬರುತ್ತಿದೆ. ಇದು ಪ್ರೇಕ್ಷಕರಿಗೆ, ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಮತ್ತು ಕುಟುಂಬದವರಿಗೆ ದೊಡ್ಡ ಅಚ್ಚರಿಯಾಗಲಿದೆ. ಬೆಳ್ಳಿತೆರೆಯ ಮೇಲೆ ಈ ಅದ್ಭುತ 3D ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬೀಳಲಿದ್ದು, ಇದು ಸಿನಿರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಲಿದೆ. ಈ ದೀಪಾವಳಿಗೆ ಥಿಯೇಟರ್ಗಳಲ್ಲಿ ಕಣ್ತುಂಬಿಕೊಳ್ಳಲೇಬೇಕಾದ ಅದ್ಭುತ ಅನುಭವ ಇದಾಗಲಿದೆ.





Be the first to comment