ಸದ್ದು ಮಾಡುತ್ತಿದೆ ‘ರಾಜನಿವಾಸ’ದ ಹಾಡು

ಬಹು ನಿರೀಕ್ಷಿತ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ರಾಜನಿವಾಸ’ದ ನಾಲ್ಕನೇ ಲಿರಿಕಲ್ ಹಾಡು ‘ಅಣ್ಣ ಯಾರು’ ಬಿಡುಗಡೆಯಾಗಿ  ಸದ್ದು ಮಾಡುತ್ತಿದೆ.

ತಂಬೂರಿ ಫಿಲ್ಮ್ಸ್ ಅರ್ಪಿಸುವ, CANOPUS CINEMAS ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ರಾಜನಿವಾಸ’ದ ನಾಲ್ಕನೇ ಲಿರಿಕಲ್ ಹಾಡು ಬಿಡುಗಡೆಯಾದ ಎರಡೇ ದಿನದಲ್ಲಿ   5 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಈ ಹಾಡಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚಿತ್ರದಲ್ಲಿ ಕೃತಿಕಾ, ರಾಘವ್ ಹಾಗೂ ಶ್ರೀ ನಗರ ಕಿಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕ ದಾ.ಪಿ. ಆಂಜನಪ್ಪ ಹಾಗೂ ಸಹ ನಿರ್ಮಾಪಕ  ಲೋಕೇಶ್ ಗೌಡ ಅವರ ನಿರ್ಮಾಣದಲ್ಲಿ, ಮಿಥುನ್ ಸುವರ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ವಿಜಯ್ ಯಾರ್ಡ್ಲಿ ವಹಿಸಿದ್ದಾರೆ.

‘ರಾಜನಿವಾಸ’ ಸಿನಿಮಾ ನವೆಂಬರ್ 6 ರಂದು ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!