ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ ಮೆಥಿಕಲ್ ಡ್ರಾಮಾ ‘ರಾಮರಸ’ದಲ್ಲಿ ಡೆಡ್ಲಿ ಆದಿತ್ಯ ‘ವೀರ ದುರ್ಮುರ್ಗಿ’ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಅವರ ಪಾತ್ರ ಕೇವಲ ಎಂಟ್ರಿ ಅಲ್ಲ. ಇದು ಕಥೆಯ ಮಹತ್ವದ ತಿರುವು. ವೀರ ದುರ್ಮುರ್ಗಿ ಶಕ್ತಿ, ಭಯ ಮತ್ತು ವಿನಾಶದ ಸಂಕೇತ. ಈ ಪಾತ್ರ ರಾಮರಸದ ನಿರೂಪಣೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ. ದಶ ಮಹಾವಿದ್ಯೆಯ ರಹಸ್ಯದ ಬಹುಪಾಲು ಭಾಗ ಅವರ ಪಾತ್ರದ ಸುತ್ತವೇ ಸುತ್ತುತ್ತದೆ.
ರಾಮರಸವು ಸಾಂಪ್ರದಾಯಿಕ ಜಾನಪದ ಮತ್ತು ಸ್ಥಳೀಯ ಆಧ್ಯಾತ್ಮಿಕ ಆಚರಣೆಗಳಿಂದ ಸ್ಫೂರ್ತಿ ಪಡೆದ, ಬೇರೂರಿದ ಫ್ಯಾಂಟಸಿ ಕಥೆಯನ್ನು ಹೊಂದಿರುವ ಚಿತ್ರ. ಡೈನಾಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಗುರು ಸಿದ್ಧನಾಗಿ, ಬಿಗ್ ಬಾಸ್ ಕನ್ನಡ ವಿನ್ನರ್ ಕಾರ್ತಿಕ್ ಮಹೇಶ್, ಬಾಲಿವುಡ್ ನ ಅದಾ ಶರ್ಮಾ , ಕಾಮಿಡಿ ಕಿಂಗ್ ಶರಣ್ ಇಂದ್ರ ದೇವೇಂದ್ರನಾಗಿ, ಗ್ಲಾಮರಸ್ ನಟಿ ಹೇಬಹ್ ಪಟೇಲ್, ಬಾಲಾಜಿ ಮನೋಹರ್, ವೈಶಾಲಿ ಮತ್ತು ಇನ್ನೂ ಅನೇಕ ಪ್ರಮುಖ ತಾರೆಯರ ಹೆಸರುಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು.
ಚಿತ್ರತಂಡ ಶೀಘ್ರದಲ್ಲೇ ಅಧಿಕೃತ ಟೀಸರ್ ಬಿಡುಗಡೆ ದಿನಾಂಕ ಮತ್ತು ಮುಂಬರುವ ಪಾತ್ರಗಳ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಅನಾವರಣಗೊಳಿಸಲಿದೆ. ಈ ಚಿತ್ರಕ್ಕೆ ಹೈ-ಎಂಡ್ ಸ್ಟುಡಿಯೋಗಳಲ್ಲಿ ಉನ್ನತ ಮಟ್ಟದ ಎಡಿಟಿಂಗ್, ಗ್ರಾಫಿಕ್ಸ್ ಮತ್ತು ಸೌಂಡ್ ಡಿಸೈನಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರೇಕ್ಷಕರಿಗೆ ದೃಶ್ಯ ವೈಭವದ ಅನುಭವ ನೀಡಲು ತಂಡ ಶ್ರಮಿಸುತ್ತಿದೆ.
—-





Be the first to comment