ಕೂಲಿಯಾದ ತಲೈವಾ!

ಕಳೆದ ವರ್ಷ ‘ಜೈಲರ್‌’ ಸೂಪರ್ ಹಿಟ್ ಸಿನಿಮಾ  ನೀಡಿದ್ದ ‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ಹೊಸ ಸಿನಿಮಾ ಘೋಷಣೆ ಆಗಿದೆ!

ಕಾಲಿವುಡ್‌ನಲ್ಲಿ ಲಿಯೋ, ಮಾಸ್ಟರ್, ಖೈದಿ, ವಿಕ್ರಮ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಫೇಮಸ್ ಆಗಿರುವ ಲೋಕೇಶ್ ಕನಕರಾಜ್‌ ಈ ಬಾರಿ ರಜನಿಕಾಂತ್‌ ಜೊತೆಗೆ ಕೈ ಜೋಡಿಸಿದ್ದಾರೆ.  ‘ಜೈಲರ್‌’ ಸಿನಿಮಾ ನಿರ್ಮಿಸಿದ್ದ ಸನ್‌ ಪಿಕ್ಚರ್ಸ್ ಸಂಸ್ಥೆ ಹೊಸ ಸಿನಿಮಾಕ್ಕೂ ಹಣ ಹಾಕುತ್ತಿದೆ.

ರಜನಿಕಾಂತ್ ಅವರ ಹೊಸ ಸಿನಿಮಾಗೆ ‘ಕೂಲಿ’ ಎಂದು ಟೈಟಲ್ ಇಡಲಾಗಿದೆ. ರಜನಿಕಾಂತ್‌, ಲೋಕೇಶ್ ಕನಕರಾಜ್‌ ಕಾಂಬಿನೇಷನ್‌ನ ‘ಕೂಲಿ’ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದ್ದು ಎಲ್ಲರ ಗಮನ ಸೆಳೆದಿದೆ. ಟೀಸರ್ ನಲ್ಲಿ ರಜನಿಕಾಂತ್  ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವುದು ಅವರ ಫ್ಯಾನ್ಸ್‌ಗೆ ಥ್ರಿಲ್ ನೀಡಿದೆ.

ರಜನಿಕಾಂತ್ ಅವರ ಸೋದರಳಿಯ ಅನಿರುದ್ಧ್‌ ರವಿಚಂದರ್ ‘ಕೂಲಿ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತೆರೆಗೆ ಬರಲಿದೆ.  ಸಿನಿಮಾದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ? ಯಾರೆಲ್ಲಾ ಕೆಲಸ ಮಾಡಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ. 2025ರ ಏಪ್ರಿಲ್‌ ವೇಳೆಗೆ ಈ ಸಿನಿಮಾ ತೆರೆಗೆ ಬರಬಹುದು ಎಂಬ ನಿರೀಕ್ಷೆಇದೆ.

ರಜನಿಕಾಂತ್ ಅವರು ಸದ್ಯ, ‘ವೆಟ್ಟೈಯನ್’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!