‘ಅಂಕಲ್ ಜೊತೆ ರೊಮ್ಯಾನ್ಸ್’ ಗೆ ಅಸಮಾಧಾನ

ತೆಲುಗು ಚಿತ್ರವೊಂದರಲ್ಲಿ ತಮಗಿಂತ ವಯಸ್ಸಿನಲ್ಲಿ  ಹಿರಿಯ ನಟನೊಂದಿಗೆ ಪ್ರಣಯ ದೃಶ್ಯಗಳಲ್ಲಿ ನಟಿಸಬೇಕಾದ ಅನಿವಾರ್ಯತೆ ಎದುರಾದ ಬಗ್ಗೆ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಹನಟಿ ಕೀರ್ತಿ ಸುರೇಶ್ ಜೊತೆ ‘ಅಕ್ಕ’ ವೆಬ್ ಸರಣಿಯ ಪ್ರಚಾರದ ವೇಳೆ  ಸಂದರ್ಶನದಲ್ಲಿ ಪಾಲ್ಗೊಂಡಿದ್ದ ರಾಧಿಕಾ ಆಪ್ಟೆ ಅವರಿಗೆ ವೃತ್ತಿಜೀವನದಲ್ಲಿ ಅತ್ಯಂತ ಸವಾಲಿನ ಪಾತ್ರ ಯಾವುದು ಎಂದು ಉತ್ತರಿಸಿದ್ದಾರೆ. 

“ನಾನು ನಟಿಸಿದ್ದ ಒಂದು ತೆಲುಗು ಸಿನಿಮಾದಲ್ಲಿ ನನ್ನ ಮಾವನನ್ನೇ (ತಾಯಿಯ ಸಹೋದರ) ಮದುವೆಯಾಗಬೇಕಿತ್ತು. ಅದು ನನ್ನ ಪಾಲಿಗೆ ಅತ್ಯಂತ ಸವಾಲಿನ ಪಾತ್ರವಾಗಿತ್ತು. ಆ ಪಾತ್ರದ ಪ್ರತಿಯೊಂದು ಅಂಶವನ್ನೂ ನಾನು ದ್ವೇಷಿಸಿದ್ದೆ” ಎಂದು ಹೇಳಿದ್ದಾರೆ. 

”ನನಗಿಂತ ತುಂಬಾ ವಯಸ್ಸಾದ ನಟನೊಂದಿಗೆ ಪ್ರಣಯ ದೃಶ್ಯಗಳಲ್ಲಿ ನಟಿಸಬೇಕಿತ್ತು. ಅದು ಸಂಪೂರ್ಣ ಪುರುಷ ಪ್ರಧಾನ ವ್ಯವಸ್ಥೆ ಮತ್ತು ವಾತಾವರಣ. ಸಿನಿಮಾದ ಮಧ್ಯಭಾಗದಲ್ಲೇ ನನ್ನ ಪಾತ್ರ ಸಾಯುತ್ತದೆ. ಅವರು ನನ್ನನ್ನು ಹೆಗಲ ಮೇಲೆ ಎತ್ತಿ ಎಸೆಯಬೇಕು.ಬಳಿಕ ಆಕ್ಷನ್ ದೃಶ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಾನು ಯಾವಾಗ ಸಾಯುತ್ತೇನೆ ಎಂದು ಕಾಯುತ್ತಿದ್ದೆ” ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ರಾಧಿಕಾ ಸಿನಿಮಾದ ಹೆಸರನ್ನು ನೇರವಾಗಿ ಹೇಳದಿದ್ದರೂ, ಅವರು ವಿವರಿಸಿದ ದೃಶ್ಯಗಳು ಬೋಯಪಾಟಿ ಶ್ರೀನು ನಿರ್ದೇಶನದ 2014ರ ತೆಲುಗು ಸಿನಿಮಾ ‘ಲೆಜೆಂಡ್’ಗೆ ಸಂಬಂಧಿಸಿದ್ದಾಗಿದೆ.  ತೆಲುಗು ಮತ್ತು ತಮಿಳು ರಾಜ್ಯಗಳ ಕೆಲವು ಸಮುದಾಯಗಳಲ್ಲಿ ಇಂತಹ ವಿವಾಹ ಪದ್ಧತಿ  ಇದೆ.

‘ಲೆಜೆಂಡ್’ ಸಿನಿಮಾ ಬಿಡುಗಡೆಯಾದಾಗ ಬಾಲಕೃಷ್ಣ ಅವರಿಗೆ 54 ವರ್ಷವಾಗಿದ್ದರೆ, ರಾಧಿಕಾ ಆಪ್ಟೆ ಅವರಿಗೆ 29 ವರ್ಷ ವಯಸ್ಸಾಗಿತ್ತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!