ಜೀ5ಗೆ ‘ಪ್ರೇಮದ ಊರಲಿ’ ಓಟಿಟಿ ಹಕ್ಕು

ಆರನೇ ವಾರದಲ್ಲೂ ಪ್ರೇಕ್ಷಕರನ್ನು ಸೆಳೆಯುತ್ತಿರುವ ‘ಪ್ರೇಮದ ಊರಲಿ’  ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳು ಜೀ5 ಸಂಸ್ಥೆಗೆ ಮಾರಾಟವಾಗಿವೆ ಎಂದು ತಿಳಿದು ಬಂದಿದೆ.

ಚಿತ್ರತಂಡದ ಕೋರಿಕೆಯ ಮೇರೆಗೆ ಒಪ್ಪಂದದ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸದಿರಲು ಕಂಪನಿ ನಿರ್ಧರಿಸಿದೆ ಎನ್ನಲಾಗಿದೆ. ಇತ್ತೀಚೆಗೆ ಜೀ ಕನ್ನಡದ ಕಾರ್ಯಕ್ರಮವೊಂದರಲ್ಲಿ ಚಿತ್ರತಂಡ ಭಾಗವಹಿಸಿರುವುದು ಚರ್ಚೆಗೆ ಕಾರಣವಾಗಿದೆ.

ಮನೋಜ್ ಕುಮಾರ್ ಅವರ ‘ಪ್ರೇಮದ ಊರಲಿ’ ಸೆಪ್ಟೆಂಬರ್ 25ರಂದು ತೆರೆಕಂಡಿತ್ತು.  ಸಿನಿಮಾ ಈಗ 150 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ಬಿಡುಗಡೆಯಾಗಿ 38 ದಿನ ಕಳೆದರೂ ಚಿತ್ರಮಂದಿರಗಳಲ್ಲಿ ತನ್ನ ಓಟ ನಿಲ್ಲಿಸಿಲ್ಲ.

ಭಾರತದಲ್ಲಿನ ಚಿತ್ರದ ನಿವ್ವಳ ಗಳಿಕೆ 110.82 ಕೋಟಿ ರೂ.ತಲುಪಿದೆ.  ವಿಶ್ವಾದ್ಯಂತ ಚಿತ್ರದ ಒಟ್ಟು ಗಳಿಕೆ  150 ಕೋಟಿ ರೂ. ದಾಟಿದೆ. ರಂಗಾಯಣ ರಘು, ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ತಂದೆ-ಮಗನ ಬಾಂಧವ್ಯ, ಹಳ್ಳಿಯ ಬದುಕು, ಪ್ರೀತಿ ಮತ್ತು ಕುಟುಂಬದ ಭಾವನಾತ್ಮಕ ಸಂಬಂಧಗಳನ್ನು ಒಳಗೊಂಡ ಕಥೆ ಪ್ರೇಕ್ಷಕರ ಮನ ಗೆದ್ದಿದೆ.

ಮೊದಲ ದಿನ ರಾಜ್ಯಾದ್ಯಂತ ಸುಮಾರು 60 ಶೋಗಳಲ್ಲಿ ಪ್ರದರ್ಶನ ಕಂಡಿದ್ದ ಸಿನಿಮಾ ಒಬ್ಬರಿಂದ ಒಬ್ಬರಿಗೆ ಚಿತ್ರದ ಬಗ್ಗೆ ಮಾಹಿತಿ ಹರಡಿ ಕುಟುಂಬ ಸಮೇತ ಜನರು ಚಿತ್ರಮಂದಿರಗಳಿಗೆ ಬರಲಾರಂಭಿಸಿದ ಪರಿಣಾಮ ಎರಡನೇ ವಾರದಿಂದ  ಕಲೆಕ್ಷನ್‌ನಲ್ಲಿ ಭಾರಿ ಏರಿಕೆ ಕಂಡು ಬಂತು. ಆರಂಭದಲ್ಲಿ 60 ಶೋಗಳನ್ನು ಹೊಂದಿದ್ದ ಸಿನಿಮಾ ಕೆಲವೇ ದಿನಗಳಲ್ಲಿ 1,200ಕ್ಕೂ ಹೆಚ್ಚು ಶೋಗಳನ್ನು ಪಡೆದುಕೊಂಡಿತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!