ಪುನೀತ್​ ಅಭಿನಯದ ‘ನಟಸಾರ್ವಭೌಮ’ ಟೀಸರ್​’

ಚಂದನವನದಲ್ಲಿ ಈ ಬಾರಿಯ ಡಿಸೆಂಬರ್​ ತಿಂಗಳು ಸದಾ ನೆನಪಿರುವ ದಿನ ಎಂದರೆ ತಪ್ಪಾಗಲಾರದು. ಹೌದು ನಿನ್ನೆ ಮಧ್ಯರಾತ್ರಿ ಪುನೀತ್ ಅಭಿನಯದ ‘ನಟಸಾರ್ವಭೌಮ’ ಟೀಸರ್​ ಬಿಡುಗಡೆಯಾದರೆ, ಇಂದು (ಡಿ.21)ರಂದು ಬಹು ನಿರೀಕ್ಷಿತ ಸಿನಿಮಾ ‘ಕೆ.ಜಿ.ಎಫ್​’ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಒಂದು ನಿಮಿಷ 19 ಸೆಕೆಂಡ್​ನ ಟೀಸರ್​ನಲ್ಲಿ ಅಪ್ಪು ಡಾನ್ಸ್​, ಫೈಟ್ಸ್​ ಹಾಗೂ ಸಾಧು ಮತ್ತು ಚಿಕ್ಕಣ್ಣರ ಹಾಸ್ಯಮ ಗುಳಿಕೆನ್ನೆ ಸುಂದರಿ ರಚಿತಾ ರಾಮ್​ರ ವಯ್ಯಾರವನ್ನೂ ನೋಡಬಹುದಾಗಿದೆ.

ಇನ್ನೂ ದೊಡ್ಮನೆ ಹುಡುಗ ಪುನೀತ್​ ಅಭಿನಯದ ‘ನಟಸಾರ್ವಭೌಮ’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ. ಹೀಗಿರುವಾಗಲೇ ಈ ಚಿತ್ರತಂಡ ಟೀಸರ್​ ಅನ್ನು ಬಿಡುಗಡೆ ಮಾಡಿದ್ದು, ಅದಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!