PRETHA Movies Review : ಆತ್ಮದ ಕಥೆ “ಪ್ರೇತ”

ಚಿತ್ರ: ಪ್ರೇತ

ನಿರ್ದೇಶನ ಹಾಗೂ ನಿರ್ಮಾಣ: ಹರೀಶ್ ರಾಜ್
ತಾರಾ ಬಳಗ: ಹರೀಶ್ ರಾಜ್, ಆಹಿರಾ ಶೆಟ್ಟಿ, ಅಮೂಲ್ಯ ಭಾರದ್ವಾಜ್, ಅಮಿತ್ ಇತರರು

ರೇಟಿಂಗ್: 3.5/5

ಮಗುವನ್ನು ಕಳೆದುಕೊಂಡ ಮಹಿಳೆಯ ದೇಹದಲ್ಲಿ ಆತ್ಮ ಪ್ರವೇಶ ಆಗಿ ಮುಂದೆ ರೋಚಕ ತಿರುವು ಪಡೆದುಕೊಳ್ಳುವ ಚಿತ್ರ ಪ್ರೇತ.

ಈ ವಾರ ಕಾಣದ ಶಕ್ತಿಯ ಜೊತೆಗೆ ಬದುಕುವ ಅನಿವಾರ್ಯತೆಯ ಕಥೆ ಹೊಂದಿದ ಚಿತ್ರವಾಗಿ ಪ್ರೇತ ಪ್ರೇಕ್ಷಕರ ಮುಂದೆ ಬಂದಿದೆ. ಸರಕಾರಿ ವೈದ್ಯ ಸೂರ್ಯ ಪಾತ್ರಧಾರಿ ಹರೀಶ್ ರಾಜ್ ತನ್ನ ಪತ್ನಿ ಲೇಖ ಪಾತ್ರಧಾರಿ ಅಹಿರಾ ಶೆಟ್ಟಿ ಜೊತೆಗೆ ಮುದ್ದಾದ ಮಗುವನ್ನು ಕಳೆದುಕೊಂಡ ಸಂದರ್ಭದಲ್ಲಿ ಪತ್ನಿಯ ಮನಸ್ಥಿತಿಯನ್ನು ಸುಧಾರಿಸಲು ಬೆಂಗಳೂರಿಗೆ ವರ್ಗಾವಣೆ ಮಾಡಿಕೊಳ್ಳುತ್ತಾನೆ. ಸುಮಾರು ಎರಡು ಶತಮಾನದ ಹಳೆಯ ಕಟ್ಟಡದಲ್ಲಿ ಜನರ ಸೇವೆ ಮಾಡಲು ಮುಂದಾಗುತ್ತಾನೆ. ಅಲ್ಲಿ ಲೇಖ ತನ್ನ ಮಗುವಿನ ಜೊತೆಗೆ ಮಾತನಾಡುವ ಆಸೆಯೊಂದಿಗೆ ಪ್ರೇತ, ಆತ್ಮಗಳ ವಿಚಾರವನ್ನು ನಂಬುತ್ತಾಳೆ. ಅಲ್ಲಿಂದ ಅವಳ ದೇಹದಲ್ಲಿ ಆತ್ಮದ ಸಂಚಾರವಾಗುತ್ತದೆ. ಮುಂದೆ ಚಿತ್ರ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತದೆ.

ಲೇಖಳ ದೇಹದಲ್ಲಿರುವುದು ಯಾರು? ಆತ್ಮದ ಕಥೆ ಏನು ಎನ್ನುವುದನ್ನು ತಿಳಿಯಲು ಚಿತ್ರವನ್ನು ನೋಡಬೇಕಿದೆ.

ಹರೀಶ್ ರಾಜ್ ಚಿತ್ರವನ್ನು ಕುತೂಹಲಕಾರಿಯಾಗಿ ನಡೆಯುವ ಯತ್ನವನ್ನು ಮಾಡಿದ್ದಾರೆ. ಚಿತ್ರದ ಎರಡನೇ ಭಾಗ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತದೆ. ಹಿನ್ನೆಲೆ ಸಂಗೀತ ಹೆಚ್ಚು ಹೈಲೈಟ್ ಆಗಿದ್ದು ಪ್ರೇಕ್ಷಕರನ್ನು ಭಯಕ್ಕೆ ದೂಡುತ್ತದೆ. ಚಿತ್ರದ ಸಂಭಾಷಣೆ ಹಾಗೂ ಯಕ್ಷಗಾನ ಹಾಡು ಗಮನ ಸೆಳೆಯುತ್ತದೆ.

ಹರೀಶ್ ರಾಜ್ ಚಿತ್ರದಲ್ಲಿ ತಮ್ಮ ನಟನೆಯ ಸಾಮರ್ಥ್ಯವನ್ನು ಉತ್ತಮವಾಗಿ ಪ್ರದರ್ಶಿಸಿದ್ದಾರೆ. ಎರಡು ಶೇಡ್ ಗಳಲ್ಲಿ ನಟಿಸಿರುವ ನಾಯಕಿ ಅಹಿರಾ ಶೆಟ್ಟಿ, ಗಮನ ಸೆಳೆಯುತ್ತಾರೆ. ಮಂತ್ರವಾದಿ ಪಾತ್ರಧಾರಿ ಬಿ ಎಂ ವೆಂಕಟೇಶ್, ಅಮಿತ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಸಸ್ಪೆನ್ಸ್, ಹಾರರ್, ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಪ್ರೇತ ಇಷ್ಟವಾಗಬಹುದು.

———-

Be the first to comment

Leave a Reply

Your email address will not be published. Required fields are marked *

Translate »
error: Content is protected !!