‘present ಪ್ರಪಂಚ ೦% ಲವ್` ಚಿತ್ರೀಕರಣ ಬಹುತೇಕ ಪೂರ್ಣ

ಫ಼್ರೆಂಡ್ಸ್ ಮೀಡಿಯಾ ಪ್ರೋಡಕ್ಷನ್ಸ್ ಲಾಂಛನದಲ್ಲಿ ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಹೆಚ್.ಪಿ ಅವರು ನಿರ್ಮಿಸುತ್ತಿರುವ `present ಪ್ರಪಂಚ ೦% ಲವ್` ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಒಂದು ಸಾಹಸ ಸನ್ನಿವೇಶದ ಚಿತ್ರೀಕರಣ ಮಾತ್ರ ಬಾಕಿಯಿದೆ. ಬೆಂಗಳೂರು, ಮೈಸೂರು, ಹೊಗೆನಿಕಲ್‌ನಲ್ಲಿ ೩೫ ದಿನಗಳ ಕಾಲ ಚಿತ್ರೀಕರಣ ನಡೆದಿದೆ.

ಈ ಹಿಂದೆ `ಸಂಯುಕ್ತ 2` ಚಿತ್ರವನ್ನು ನಿರ್ದೇಶಿಸಿದ್ದ ಅಭಿರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಾಮಿಡಿ, ಲವ್, ಸೆಂಟಿಮೆಂಟ್ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಕೆ.ವಿ.ರವಿಚಂದ್ರ ಸಂಗೀತ ನೀಡಿದ್ದಾರೆ. ಈಶ್ವರಿ ಸುರೇಶ್ ಛಾಯಾಗ್ರಹಣ, ವೆಂಕಿ ಸಂಕಲನ, ಕುಂಫ಼ು ಚಂದ್ರು, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ಹರಿಕೃಷ್ಣ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ.

ಈ ಹಿಂದೆ `ಕೆಮಿಸ್ತ್ರಿ ಕರಿಯಪ್ಪ` ಹಾಗೂ`ಸಂಯುಕ್ತ 2` ಚಿತ್ರದ ನಿರ್ಮಾಪಕರಾಗಿದ್ದ ಅರ್ಜುನ್ ಮಂಜುನಾಥ್ ಈ ಚಿತ್ರದ ನಾಯಕ. ರಂಗಭೂಮಿ ಹಿನ್ನೆಲೆಯ ಯಶಸ್ ಅಭಿ ಈ ಚಿತ್ರದ ದ್ವಿತೀಯ ನಾಯಕ  ಸಂಭ್ರಮ ಶ್ರೀ, ಅಕ್ಷತ ಈ ಚಿತ್ರದ ನಾಯಕಿಯರು.  ತಬಲನಾಣಿ, ಲಯೇಂದ್ರ, ಎಸ್.ನಾರಾಯಣ್, ಓಂಪ್ರಕಾಶ್‌ರಾವ್, ಚಂದನಾಚಾರ್, ಸಂಜನ, ಗೋವಿಂದೇಗೌಡ, ಉಮೇಶ್ ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: this website

Leave a Reply

Your email address will not be published. Required fields are marked *

Translate »
error: Content is protected !!