‘ಪ್ರೇಮಿಗಳ ದಿನಾಚರಣೆಗೆ ‘ಐ ಲವ್ ಯೂ’ಬಿಡುಗಡೆ

‘ಲವ್’ ಅನ್ನೋ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದು ಹೀಗೂ ಮಾಡಬಹುದಾ ಅನ್ನೋ ಪ್ರಶ್ನೆಯನ್ನು ಎಲ್ಲರಲ್ಲೂ ಮೂಡುವಂತೆ ಮಾಡಿದವರು ರಿಯಲ್ ಸ್ಟಾರ್ ಉಪೇಂದ್ರ. ಈ ಹಿಂದೆ ‘ಬ್ರಹ್ಮ’ ಚಿತ್ರದ ಮೂಲಕ ಆರ್.ಚಂದ್ರು   ಅವರ ಜತೆಯಾಗಿದ್ದ ಅವರು ಲವ್ ಯೂ’ ಚಿತ್ರದ ಮೂಲಕ ಮತ್ತೆ ಒಂದಾಗಿರೋದು ಹಳೆಯ ಸುದ್ದಿ.

ಇನ್ನು ಹಿಂದಿನ ಚಿತ್ರಗಳಿಗೂ ಹೋಲಿಸಿದರೆ ‘ಐ ಲವ್ ಯೂ’ ಸಿನಿಮಾದಲ್ಲಿ ಡಿಫರೆಂಟ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿರುವುದು ವಿಶೇಷ. ಇನ್ನು ಟೈಟಲ್‌ನ ವಿಚಾರಕ್ಕೆ ಬಂದರೆ ‘ಐ ಲವ್ ಯೂ’ ಚಿತ್ರದ ಟೈಟಲ್‌ನಲ್ಲಿ ಕೂಡ ಒಂದು ಸಂಕೇತವಿದ್ದು, ಇದು ಪ್ರೀತಿಯ ಸಿಂಬಲ್ ಅನ್ನೋದು ನಿರ್ದೇಶಕರ ಅಂಬೋಣ. ಸಿನಿಮಾ ಟೈಟಲ್‌ಗಳನ್ನೂ ಸಿಂಬಾಲಿಕ್ ಆಗಿ ತೋರಿಸುವ ಉಪ್ಪಿ ಅವರ ಸ್ಟೈಲನ್ನೇ ಆರ್. ಚಂದ್ರು ಫಾಲೋ ಮಾಡುತ್ತಿರುವುದು ಈ ಮೂಲಕ ಸ್ಪಷ್ಟವಾಗಿದೆ.

ಡಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಪ್ರೀತ್ಸೆ’ ಸಿನಿಮಾದ ಎವರ್‌ಗ್ರೀನ್ ‘ಪ್ರೀತ್ಸೆ.. ಪ್ರೀತ್ಸೆ’…. ಹಾಡೊಂದನ್ನು ‘ಐ ಲವ್ ಯೂ’ ಸಿನಿಮಾದಲ್ಲಿ ಚಂದ್ರು ಅಳವಡಿಸಿಕೊಂಡಿರುವುದು ಉಪ್ಪಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ರಚಿತಾ ರಾಮ್ ಉಪ್ಪಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜತೆಗೆ ಸೋನು ಗೌಡ ಚಿತ್ರದ ಮತ್ತೋರ್ವ ನಾಯಕಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ರವಿ ಕಾಳೆ ಮತ್ತಿತರರು ನಟಿಸಿದ್ದಾರೆ.

ಅಂದಹಾಗೆ ‘ಐ ಲವ್ ಯೂ’ ಸಿನಿಮಾ ಮುಂದಿನ ವರ್ಷ ‘ಪ್ರೇಮಿಗಳ ದಿನಾಚರಣೆ’ಯಂದು ಬಿಡುಗಡೆಯಾಗಲಿರುವ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದ್ದು, ಆರ್. ಚಂದ್ರು ಒಂದು ಸುಂದರ ಲವ್‌ಸ್ಟೋರಿಯ ಮೂಲಕ ಉಪ್ಪಿಯೊಂದಿಗೆ ಮತ್ತೆ ಬರಲಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

This Article Has 1 Comment
  1. Pingback: live sex shows

Leave a Reply

Your email address will not be published. Required fields are marked *

Translate »
error: Content is protected !!