ಪ್ರೇಮದ ಊರಲಿ

BookMyShowನಲ್ಲಿ ʻಪ್ರೇಮದ ಊರಲಿʼ ಸಿನಿಮಾ ನಂಬರ್ 1

ಬುಕ್‌ಮೈಶೋನಲ್ಲಿ (BookMyShow) ಅಜಯ್‌ ದೇವ್‌ಗನ್‌ ನಟನೆಯ ʻದೃಶ್ಯಂ 3ʼ ಸಿನಿಮಾವನ್ನು ಬೀಟ್‌ ಮಾಡಿದ ರಾಷ್ಟ್ರಪ್ರಶಸ್ತಿ ವಿಜೇತ ಮನೋಜ್‌ ಕುಮಾರ್‌ ನಿರ್ದೇಶನದ ಮತ್ತು ವೆನಿಲ್ಲಾ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ʻಪ್ರೇಮದ ಊರಲಿʼ ಸಿನಿಮಾ.

ಅಕ್ಟೋಬರ್ 12ರಂದು ಬುಕ್‌ಮೈಶೋನಲ್ಲಿ ಕನ್ನಡದ ‘ಪ್ರೇಮದ ಊರಲಿ’ ಸಿನಿಮಾ ಭಾರತದಲ್ಲೇ ಅತ್ಯಧಿಕ ಟಿಕೆಟ್ ಮಾರಾಟವಾದ ಚಿತ್ರವಾಗಿ ಹೊರಹೊಮ್ಮಿದೆ. ಅ. 12ರ ಒಂದೇ ದಿನ ‘ಪ್ರೇಮದ ಊರಲಿ’ ಚಿತ್ರದ ಬರೋಬ್ಬರಿ 1.49 ಲಕ್ಷ ಟಿಕೆಟ್‌ಗಳು ಬುಕ್ ಆಗಿವೆ.

ಹಿಂದಿಯ ‘ದೃಶ್ಯಂ 3’ (1.14 ಲಕ್ಷ ಟಿಕೆಟ್‌ಗಳು) ಮತ್ತು ‘ಜೈಲರ್ 2’ನಂತಹ ಬಹುನಿರೀಕ್ಷಿತ ಚಿತ್ರಗಳನ್ನು ಹಿಂದಿಕ್ಕಿ ಕನ್ನಡದ ಈ ಚಿತ್ರ ಮುನ್ನಡೆ ಸಾಧಿಸಿದೆ.

ಅತಿ ಹೆಚ್ಚು ಟಿಕೆಟ್ ಮಾರಾಟದ ಮೂಲಕ ‘ಪ್ರೇಮದ ಊರಲಿ’ ಸಿನಿಮಾ ಇಡೀ ಭಾರತದಲ್ಲೇ ನಂಬರ್ 1 ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ವಾರಾಂತ್ಯ ಮಾತ್ರವಲ್ಲದೆ ವಾರದ ದಿನಗಳಲ್ಲೂ (ವೀಕ್‌ಡೇಸ್) ಸಿನಿಮಾದ ಹವಾ ಮುಂದುವರಿದಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

2026ರಲ್ಲಿ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದು, ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!