ಜೈಲರ್ 2: ಕರ್ನಾಟಕದಲ್ಲಿ ಹಗಲು ದರೋಡೆ

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಟಿಕೆಟ್ ದರ ಬೆಂಗಳೂರಿನಲ್ಲಿ 1800 ರು.ವರೆಗೆ ತಲುಪಿದೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕೇವಲ  50 ರಿಂದ 200 ರೊಳಗೆ ಸಿನಿಮಾ ವೀಕ್ಷಿಸಬಹುದಾಗಿದೆ. ಕರ್ನಾಟಕದಲ್ಲಿ ವೀಕೆಂಡ್ ಹಾಗೂ ಸ್ಟಾರ್ ನಟರ ಸಿನಿಮಾಗಳ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್‌ಗಳು ನಡೆಸುವ ದರ ಹೆಚ್ಚಳವನ್ನು ಪ್ರೇಕ್ಷಕರು ‘ಹಗಲು ದರೋಡೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ  ಖಂಡಿಸುತ್ತಿದ್ದಾರೆ.

ಚೆನ್ನೈನಲ್ಲಿ ‘ಜೈಲರ್ ‘2 ಟಿಕೆಟ್ ದರಗಳು ಕೇವಲ 50 ರಿಂದ 400 ರು.ರಷ್ಟಿದೆ. ತಮಿಳುನಾಡಿನ ಬಹುತೇಕ ಚಿತ್ರಮಂದಿರಗಳಲ್ಲಿ ಗರಿಷ್ಠ ದರ  250 ರು. ಆಸುಪಾಸಿನಲ್ಲಿದೆ.   ಬೆಂಗಳೂರಿನಲ್ಲಿ ಮುಂಜಾನೆ 6 ಗಂಟೆಯ ಆರಂಭಿಕ ಪ್ರದರ್ಶನಗಳ ಟಿಕೆಟ್ ದರಗಳು ರು.670 ರಿಂದ ಆರಂಭವಾಗಿ ರು.1,600,  ಪ್ರೀಮಿಯಂ ಮತ್ತು ರಿಕ್ಲೈನರ್ ಸೀಟುಗಳಿಗೆ ರು.1,800 ರಿಂದ 2,000 ವರೆಗೆ ತಲುಪಿದೆ. ಸರಾಸರಿ ಟಿಕೆಟ್ ದರ ರು.800 ರಿಂದ 1,000 ಇದೆ.

ತಮಿಳುನಾಡು ಸರ್ಕಾರ ಚಿತ್ರಮಂದಿರಗಳ ಟಿಕೆಟ್ ದರದ ಮೇಲೆ ಗರಿಷ್ಠ ಮಿತಿಯನ್ನು ಹೇರಿದೆ. ಅಲ್ಲಿನ ಮಲ್ಟಿಪ್ಲೆಕ್ಸ್‌ ಅಥವಾ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಾಗಲಿ ಸರ್ಕಾರದ ಅನುಮತಿಯಿಲ್ಲದೆ ಗಿ ಟಿಕೆಟ್ ದರವನ್ನು ಬೇಕಾಬಿಟ್ಟಿ ಹೆಚ್ಚಿಸುವಂತಿಲ್ಲ.

ಕರ್ನಾಟಕದಲ್ಲಿ ಬೇಡಿಕೆಗೆ ಅನುಗುಣವಾಗಿ ದರವನ್ನು ನಿಗದಿಪಡಿಸುವ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇದೆ. ಇದನ್ನು ಬಳಸಿಕೊಂಡು ಮಲ್ಟಿಪ್ಲೆಕ್ಸ್ ಮಾಲೀಕರು ಮತ್ತು ವಿತರಕರು ಆರಂಭದ ದಿನಗಳಲ್ಲಿ ಟಿಕೆಟ್ ದರವನ್ನು ಗಗನಕ್ಕೇರಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ತಮಿಳು ಚಿತ್ರ  ಮತ್ತು ರಜನಿಕಾಂತ್ ಅವರಿಗೆ ಇರುವ ಬೇಡಿಕೆಯನ್ನು ಬಂಡವಾಳ ಮಾಡಿಕೊಂಡು ದೊಡ್ಡ ಮೊತ್ತವನ್ನು ವಸೂಲಿ ಮಾಡಲಾಗುತ್ತಿದೆ. ‘ಜೈಲರ್ 2’ ಚಿತ್ರ ಅಕ್ಟೋಬರ್ 15 ರಂದು ವಿಶ್ವಾದ್ಯಂತ ತೆರೆಕಾಣಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!