pathan `ಪಠಾಣ್’ ಗೆ ಸೆನ್ಸಾರ್ ಶಾಕ್

`ಪಠಾಣ್’ ಸಿನಿಮಾದ `ಬೇಷರಂ ರಂಗ್’ ಹಾಡಿನ ಜೊತೆ ಚಿತ್ರದಲ್ಲಿನ ಅನೇಕ ದೃಶ್ಯಗಳನ್ನ ಬದಲಾವಣೆ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ `ಪಠಾಣ್’ ಜನವರಿ 25ರಂದು ತೆರೆಗೆ ಬರಲಿದೆ. ರಿಲೀಸ್‌ಗೂ ಮುನ್ನ ಚಿತ್ರದಲ್ಲಿ ಬದಲಾವಣೆ ಆಗದೇ ಇದ್ದಲ್ಲಿ ಸೆನ್ಸಾರ್ ಪತ್ರ ಸಿಗುವುದು ತಡವಾಗಲಿದೆ.

ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ಬಹಳ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಹಾಡುಗಳೇ ಸಾಕ್ಷಿ ಒದಗಿಸಿವೆ. ಇದೇ ಕಾರಣದಿಂದ ಸಿನಿಮಾದಲ್ಲಿನ ಬಹುತೇಕ ದೃಶ್ಯಗಳಿಗೆ ಸೆನ್ಸಾರ್​ ಮಂಡಳಿಯಲ್ಲಿ ತಕರಾರು ವ್ಯಕ್ತವಾಗಿರಬಹುದು. ಹಲವು ದೃಶ್ಯಗಳಲ್ಲಿ ಬದಲಾವಣೆ ಮಾಡಿಕೊಂಡು, ಪುನಃ ಸೆನ್ಸಾರ್​ಗೆ ಕಳಿಸಲು ಸೂಚಿಸಲಾಗಿದೆ. ಇದು ಶಾರುಖ್​ ಖಾನ್​ ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

ಚಿತ್ರ ಬಿಗ್​ ಬಜೆಟ್​ನಲ್ಲಿ ಮೂಡಿಬಂದಿದೆ. ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಜೊತೆಯಲ್ಲಿ ಜಾನ್​ ಅಬ್ರಾಹಂ ಕೂಡ ಮುಖ್ಯ ಪಾತ್ರ ಮಾಡಿದ್ದಾರೆ.

ಹಲವು ದೇಶಗಳಲ್ಲಿ ಸಿನಿಮಾದ ದೃಶ್ಯಗಳನ್ನು ಚಿತ್ರಿಸಲಾಗಿದೆ. ಇದು ಶಾರುಖ್​ ಖಾನ್​ ಅವರ ಕಮ್​ಬ್ಯಾಕ್​ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!