Jamaligudda Review : ರೆಟ್ರೋ ಅನುಭವ ನೀಡುವ ಜಮಾಲಿಗುಡ್ಡ

Once Upon A Time In Jamaligudda Review :

ಚಿತ್ರ: ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ

ನಿರ್ಮಾಣ: ಶ್ರೀ ಹರಿ
ನಿರ್ದೇಶನ: ಕುಶಾಲ್​ ಗೌಡ
ಪಾತ್ರವರ್ಗ: ಡಾಲಿ ಧನಂಜಯ್​, ಅದಿತಿ ಪ್ರಭುದೇವ, ಯಶ್​ ಶೆಟ್ಟಿ, ಪ್ರಾಣ್ಯ ಪಿ. ರಾವ್​ ಮುಂತಾದವರು

ರೇಟಿಂಗ್: 4

ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ ಹಳೇ ಕಾಲದ ಕಥೆ ಹೊಂದಿದೆ. ಇದರ ಮೂಲಕ 90ರ ದಶಕದ ರೆಟ್ರೋ ಅನುಭವವನ್ನು ಪ್ರೇಕ್ಷಕರಿಗೆ ನೀಡಲಾಗಿದೆ. ಮೊಬೈಲ್​ ಫೋನ್​ ಇಲ್ಲದ ದಿನಗಳನ್ನು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸಲಾಗಿದೆ.

ಚಿತ್ರದ ಕಥಾನಾಯಕ ಕೃಷ್ಣ ಅಲಿಯಾಸ್​ ಹಿರೋಶಿಮಾ ಮುಗ್ಧ ಯುವಕ. ಚುಕ್ಕಿ ಎಂಬ ಪುಟ್ಟ ಹುಡುಗಿ ಆತನನ್ನು ಪ್ರೀತಿಯಿಂದ ಮಾಮ ಅಂತ ಕರೆಯುತ್ತಾಳೆ. ಇಬ್ಬರೂ ಒಂದು ಕಾರಿನಲ್ಲಿ ಪ್ರವಾಸ ಹೊರಟಾಗ ಆ ಹುಡುಗಿಯನ್ನು ಕಿಡ್ನಾಪ್​ ಮಾಡಿದ ಆರೋಪ ಕೃಷ್ಣನ ಮೇಲೆ ಬರುತ್ತದೆ. ಇದಕ್ಕೆ ಒಂದು ಫ್ಲ್ಯಾಶ್​ ಬ್ಯಾಕ್​ ಇದೆ. ಇದನ್ನು ತಿಳಿಯಲು ಸಿನಿಮಾ ನೋಡಬೇಕು.

ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ರುಕ್ಕು ಎಂಬ ಹಳ್ಳಿ ಹುಡುಗಿಯ ಪಾತ್ರ ನಿಭಾಯಿಸಿದ್ದಾರೆ. ಕಡು ಬಡತನದಲ್ಲಿ ನೊಂದ ಹುಡುಗಿಯ ಪಾತ್ರ ಅವರದ್ದು. ತಂದೆ-ತಾಯಿಯ ಜಗಳದ ಮಧ್ಯದಲ್ಲಿ ನಲುಗಿದ ಬಾಲಕಿಯ ಪಾತ್ರದಲ್ಲಿ ಪ್ರಾಣ್ಯ ಪಿ. ರಾವ್​ ಕಾಣಿಸಿಕೊಂಡಿದ್ದಾರೆ.

ಯಶ್​ ಶೆಟ್ಟಿ ಈ ಸಿನಿಮಾದಲ್ಲಿ ನೆಗೆಟಿವ್​ ಶೇಡ್​ ಇರುವ ಪಾತ್ರ ಮಾಡಿದ್ದಾರೆ. ಕ್ರೂರವಾದ ಆ ಪಾತ್ರಕ್ಕೆ ಅವರ ಗೆಟಪ್​ ಸಾಥ್​ ನೀಡಿದೆ. ನಾಗಸಾಕಿ ಎಂಬ ಖೈದಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಹಿರೋಶಿಮಾ ಮತ್ತು ನಾಗಸಾಕಿ ನಡುವಿನ ಗೆಳೆತನ, ಜಗಳ ಗಮನ ಸೆಳೆಯುತ್ತದೆ.

ಚಿತ್ರದಲ್ಲಿ ಧನಂಜಯ್​ ಅವರು ಕ್ಲಾಸ್​ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಒಳ್ಳೆಯತನವನ್ನು ಮೈತುಂಬ ಆವಾಹಿಸಿಕೊಂಡಿರುವ ಮುಗ್ಧ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಡಿಫರೆಂಟ್​ ಆಗಿ ನೋಡಲು ಬಯಸುವ ಅಭಿಮಾನಿಗಳಿಗೆ ‘ಜಮಾಲಿಗುಡ್ಡ’ ಖುಷಿ ನೀಡಬಹುದು.

ಚಿತ್ರ ಉತ್ತಮವಾಗಿ ಬರಲು ಹಿನ್ನೆಲೆ ಸಂಗೀತದಲ್ಲಿ ಅನೂಪ್ ಸೀಳಿನ್, ಸಂಗೀತದಲ್ಲಿ ಅರ್ಜುನ್​ ಜನ್ಯ ಕೊಡುಗೆ ನೀಡಿದ್ದಾರೆ.
______

Be the first to comment

Leave a Reply

Your email address will not be published. Required fields are marked *

Translate »
error: Content is protected !!