ನಿತ್ಯಾ ಮೆನನ್ ನಿರ್ಮಾಣ ಮತ್ತು ಅಭಿನಯದ ‘ಪ್ರೊಡಕ್ಷನ್ ನಂ. 5’ ಸಿನಿಮಾವನ್ನು ಖ್ಯಾತ ನಿರ್ಮಾಣ ಸಂಸ್ಥೆ ‘ಲಿಯೋ ವಿಷನ್’ ಅಧಿಕೃತವಾಗಿ ಘೋಷಿಸಿದೆ.
ಈ ಚಿತ್ರದ ಮೂಲಕ ಬಹುಭಾಷಾ ನಟಿ ನಿತ್ಯಾ ಮೆನನ್ ಅವರು ತಮ್ಮ ‘ಕೇಯೂರಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್’ ಬ್ಯಾನರ್ ಅಡಿಯಲ್ಲಿ ಸಹ-ನಿರ್ಮಾಪಕಿಯಾಗಿ ಕೈಜೋಡಿಸಿದ್ದಾರೆ. ಫ್ಯಾಂಟಸಿ ಡಾರ್ಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ವಿಶಿಷ್ಟ ಚಿತ್ರದಲ್ಲಿ ನಿತ್ಯಾ ಮೆನನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.
‘ಡಿ ಕೆ’ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಖ್ಯಾತ ನಿರ್ದೇಶಕ ವಿಕ್ರಮ್ ಕೆ. ಕುಮಾರ್ ಅವರು ‘ಕ್ರಿಯೇಟಿವ್ ಪ್ರೊಡ್ಯೂಸರ್’ ಆಗಿ ಜೋಡಿಸಿದ್ದಾರೆ. ಚಿತ್ರಕ್ಕೆ ಎ. ಶಕ್ತಿವೇಲ್ ಅವರ ಛಾಯಾಗ್ರಹಣ ಹಾಗೂ ರಿಚರ್ಡ್ ಕೆವಿನ್ ಅವರ ಸಂಕಲನವಿರಲಿದೆ.
ಲಿಯೋ ವಿಷನ್ ಸಂಸ್ಥೆಯ ವಿ. ಎಸ್. ರಾಜ್‌ಕುಮಾರ್ ಮತ್ತು ಕೇಯೂರಿ ಪ್ರೊಡಕ್ಷನ್ಸ್ ಸಂಸ್ಥೆಯ ನಿತ್ಯಾ ಮೆನನ್ ಜಂಟಿಯಾಗಿ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸುತ್ತಿದ್ದು, ಲಿಯೋ ವಿಷನ್, ಕೇಯೂರಿ ಪ್ರೊಡಕ್ಷನ್ಸ್, ನಿತ್ಯಾ ಮೆನನ್, ಡಿ ಕೆ ಹಾಗೂ ವಿಕ್ರಮ್ ಕೆ. ಕುಮಾರ್ ಅವರ ಅಪರೂಪದ ಸಹಯೋಗ ಪ್ರೇಕ್ಷಕರಿಗೆ ಅದ್ಭುತವಾದ ಅನುಭವವನ್ನು ನೀಡಲಿದೆ. ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.
—–





Be the first to comment