ನಿರ್ದೇಶಕ ಸಿಂಪಲ್ ಸುನಿ ತಮ್ಮ ಶಿಷ್ಯನಿಗಾಗಿ ಮೋಡ ಕವಿದ ವಾತಾವರಣ ಸೃಷ್ಟಿಸಿದ್ದಾರೆ. ಅರ್ಥಾತ್ ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ ಗಾಗಿ ಹೊಸ ಸಿನಿಮಾ ಮಾಡಿದ್ದಾರೆ. ಅದುವೇ ಮೋಡ ಕವಿದ ವಾತಾವರಣ. ಟೈಟಲ್ ನಿಂದ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜೂನ್ 26ರಂದು ಮೋಡ ಕವಿದ ವಾತಾವರಣ ಸಿನಿಮಾ ತೆರೆಗೆ ಬರ್ತಿದೆ. ಅಶ್ವಿನ್ ಡಿಸೈನ್ ಮಾಡಿರುವ ಚೆಂದದ ಪೋಸ್ಟರ್ ಮೂಲಕ ರಿಲೀಸ್ ಡೇಟ್ ರಿವೀಲ್ ಮಾಡಲಾಗಿದೆ.
ಶೀಲಮ್ ಅವರು ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ʼಮೋಡ ಕವಿದ ವಾತಾವರಣʼದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಸೈಂಟಿಫಿಕ್ ಫಿಕ್ಷನ್ ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ.
‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್ ಮೂವೀಸ್ ಅವರೆ ಈ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ. ಮೋಡ ಕವಿದ ವಾತಾವರಣ ಸಿನಿಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕಶ್ಯಪ್ ಸಂಕಲನ ಸಿನಿಮಾಗಿದೆ. ಈಗಾಗಲೇ ಸಂಜಿತ್ ಹೆಗಡೆ ಹಾಡಿರುವ ʼನನ್ನೆದೆಯ ಹಾಡೊಂದನುʼ ಜನಮನ್ನಣೆ ಗಳಿಸಿದೆ. ಸರೆಗಮ ಒಳ್ಳೆ ಮೊತ್ತಕ್ಕೆ ಆಡಿಯೋ ಹಕ್ಕನ್ನು ತನ್ನದಾಗಿಸಿಕೊಂಡಿದೆ.






Be the first to comment