ಎರಡನೇ ಮದುವೆ ಬಗ್ಗೆ ಮೌನ ಮುರಿದ ಮೇಘನಾ ರಾಜ್

ವಿಜಯ್‌ ರಾಘವೇಂದ್ರ ಅವರನ್ನು ಮೇಘನಾ ರಾಜ್‌ ಮತ್ತೆ ಮದುವೆಯಾಗಲಿದ್ದಾರೆ ಎಂಬ ಬಗ್ಗೆ ಮೇಘನಾ ರಾಜ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಯೂಟ್ಯೂಬ್‌ ವೊಂದಕ್ಕೆ ಪ್ರತಿಕ್ರಿಯಿಸಿರುವ ಮೇಘನಾ ರಾಜ್‌, “ಜನರಿಗೆ ನಾನು ಏನೂ ಉತ್ತರ ಕೊಟ್ಟಿದ್ದೇನೆ ಎನ್ನುವುದು ಅರ್ಥವಾಗಿಲ್ಲ. ಆದರೂ ಕಮೆಂಟ್‌ ಹಾಕಿದ್ದಾರೆ. ಇವತ್ತು ನಾನು ಉತ್ತರ ಕೊಟ್ಟರೆ ಅದಕ್ಕೂ ಕಮೆಂಟ್‌ ಹಾಕುತ್ತಾರೆ. ತುಂಬಾ ಕಮೆಂಟ್‌ ಮಾಡುವುವವರಿಗೆ ನಾನು ಹೇಳಲು ಇಷ್ಟವಿಲ್ಲ. ಅದು ಪ್ರಶ್ನೆಯಾಗಿ ಉಳಿಯಲಿಲ್ಲ. ನಾನು ಏನೂ ಹೇಳ್ತಿಲ್ಲ. ಜನ ಎಲ್ಲವನ್ನೂ ಹೇಳುತ್ತಿದ್ದಾರೆ. ಅವರಿಗೆ ಎಷ್ಟು ಖುಷಿಯಾಗುತ್ತೋ ಅಷ್ಟು ಹೇಳಲಿ” ಎಂದು ಹೇಳಿದ್ದಾರೆ.

ಕೆಲವರು ಅನಗತ್ಯವಾಗಿ  ಮೇಘನಾ ರಾಜ್ ಹಾಗೂ ವಿಜಯ್ ರಾಘವೇಂದ್ರ ಅವರ ಮದುವೆ ಬಗ್ಗೆ ಮಾತನಾಡಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಸೋಷಿಯಲ್ ಮೀಡಿಯಾದ  ಸುದ್ದಿಗಳ ವಿರುದ್ಧ  ನಟಿ ಮೇಘನಾ ರಾಜ್ ಎಚ್ಚರಿಕೆ ಕೊಟ್ಟ ನಂತರ ಸೈಲೆಂಟ್ ಆಗಿದ್ದರು.

ವಿಜಯ್ ರಾಘವೇಂದ್ರ  ಇನ್ಸ್‌ಟಾಗ್ರಾಂ ಅಕೌಂಟ್ ಮೂಲಕ  ‘ಮೇಘ ಬಂತು ಮೇಘ, ಮೇಘ ಬಂತು ಮೇಘ, ಮೇಘ ನೀಲಿಯ ಮೇಘ…. ಎಂದು ಹಾಡು ಹಾಡಿದ್ದರು.  ಇದೇ ವಿಡಿಯೋ ಇಟ್ಟುಕೊಂಡು ಕೆಲವರು ಗಾಳಿ ಸುದ್ದಿ ಹರಡುವ ಮೂಲಕ ಮದುವೆ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ.

ಮೇಘನಾ ರಾಜ್ ಅವರ ಗಂಡ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ ನಂತರ ವಿಜಯ್ ರಾಘವೇಂದ್ರ ಅವರ ಹೆಂಡತಿ ಕೂಡ ಅಕಾಲಿಕ ಮರಣ ಹೊಂದಿದರು. ಇಂತಹ ಸಮಯದಲ್ಲೇ ಕೆಲವರು ಅನಗತ್ಯವಾಗಿ, ನಟಿ ಮೇಘನಾ ರಾಜ್ ಹಾಗೂ ವಿಜಯ್ ರಾಘವೇಂದ್ರ ಅವರ ಬಗ್ಗೆ ಮಾತನಾಡಿ ಸುಳ್ಳು ಸುದ್ದಿ ಹಬ್ಬಿಸಿದ್ದರು.


 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!