ವಿಜಯ್ ಬರ್ತ್‌ಡೇಗೆ ‘ಮರ್ಸಲ್’ ರೀ-ರಿಲೀಸ್

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ವೃತ್ತಿಜೀವನದ ಸೂಪರ್ ಹಿಟ್ ಸಿನಿಮಾ ‘ಮರ್ಸಲ್’  ಚಿತ್ರಮಂದಿರಗಳಲ್ಲಿ ಜೂನ್ 22ರಂದು ಬಿಡುಗಡೆಯಾಗುತ್ತಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಜಯ್ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ ಇದಾಗಿದೆ. ಈ ವಿಶೇಷ ದಿನವನ್ನು ಸ್ಮರಣೀಯವಾಗಿಸಲು ‘ಮರ್ಸಲ್’ ಚಿತ್ರವನ್ನು ಮರು ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಚೆನ್ನೈ ಹಾಗೂ ಚೆಂಗಲ್ಪಟ್ಟು ಭಾಗದ ಆಯ್ದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ.

2017ರಲ್ಲಿ ಬಿಡುಗಡೆಯಾಗಿದ್ದ ‘ಮರ್ಸಲ್’ ಚಿತ್ರವನ್ನು ಅಟ್ಲಿ ನಿರ್ದೇಶಿಸಿದ್ದರು. ವೈದ್ಯಕೀಯ ಕ್ಷೇತ್ರದ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ಕಥಾಹಂದರದ ಮೂಲಕ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಸಿನಿಮಾದಲ್ಲಿ ವಿಜಯ್ ತಂದೆ ಹಾಗೂ ಇಬ್ಬರು ಮಕ್ಕಳ ಪಾತ್ರಗಳಲ್ಲಿ ತ್ರಿಪಾತ್ರಾಭಿನಯ ಮಾಡಿ ಪ್ರೇಕ್ಷಕರ ಮನಗೆದ್ದಿದ್ದರು.

ವಿಜಯ್. ಕಾಜಲ್ ಅಗರ್‌ವಾಲ್, ಸಮಂತಾ, ನಿತ್ಯಾ ಮೆನನ್, ಎಸ್.ಜೆ. ಸೂರ್ಯ ಹಾಗೂ ವಡಿವೇಲು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ‘ಮರ್ಸಲ್’  ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ಈಗ ಮತ್ತೆ ದೊಡ್ಡ ಪರದೆ ಮೇಲೆ ‘ಮರ್ಸಲ್’ ನೋಡಲು ಅಭಿಮಾನಿಗಳು  ಕಾಯುತ್ತಿದ್ದಾರೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!