ಏಳು ಪೌರಾಣಿಕ ಸಿನಿಮಾ ಘೋಷಿಸಿದ ಹೊಂಬಾಳೆ

ಭಾರತದ ಟಾಪ್ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ ಫಿಲಮ್ಸ್ , ಏಳು ಪೌರಾಣಿಕ ಸಿನಿಮಾ ಘೋಷಿಸಿದೆ.

ಹೊಂಬಾಳೆ ಫಿಲಮ್ಸ್  ‘ಮಹಾವತಾರ ಯೂನಿವರ್ಸ್’ ಸೃಷ್ಟಿಸಲು ಮುಂದಾಗಿದೆ.  ಭಾರತದ ಪೌರಾಣಿಕ ಕತೆಗಳಲ್ಲಿರುವಂತೆ ವಿಷ್ಣುವಿನ 7 ಮಹಾವತಾರಗಳ ಬಗ್ಗೆ ಹೊಂಬಾಳೆ ಸಿನಿಮಾ ಮಾಡಲಿದೆ. ಈಗಾಗಲೇ ‘ಮಹಾವತಾರ ನರಸಿಂಹ’ ಸಿನಿಮಾದ ಎಲ್ಲ ಕಾರ್ಯಗಳು ಮುಗಿದಿದ್ದು ಮುಂದಿನ ತಿಂಗಳು ಜುಲೈ 25ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಜುಲೈ 25, 2025 ರಂದು ಮಹಾವತಾರ ಯೂನಿವರ್ಸ್​​ನ ಮೊದಲ ಸಿನಿಮಾ ‘ಮಹಾವತಾರ ನರಸಿಂಹ’ ಬಿಡುಗಡೆ ಆಗಲಿದೆ.  ಬಳಿಕ ‘ಮಹಾವತಾರ ಪರಷುರಾಮ’ ಸಿನಿಮಾ 2027 ಕ್ಕೆ ತೆರೆಗೆ ಬರಲಿದೆ. ಶ್ರೀರಾಮನ ಕುರಿತ ‘ಮಹಾವತಾರ ರಘುನಂದನ’ ಸಿನಿಮಾ  2029 ಕ್ಕೆ ತೆರೆಗೆ ಬರಲಿದೆ.

‘ಮಹಾವತಾರ ದ್ವಾರಕಾದೀಶ’ ಸಿನಿಮಾ 2031,  ಅದೇ ಸಿನಿಮಾದ ಮುಂದುವರೆದ ಭಾಗ ‘ಮಹಾವತಾರ ಗೋಕುಲನಂದ’ 2033 ಕ್ಕೆ ತೆರೆಗೆ ಬರಲಿದೆ.  ಬಳಿಕ ‘ಮಹಾವತಾರ ಕಲ್ಕಿ 1, 2035ಕ್ಕೆ, ‘ಮಹಾವತಾರ ಕಲ್ಕಿ 2 ಸಿನಿಮಾ 2037 ಕ್ಕೆ ತೆರೆಗೆ ಬರಲಿದೆ.

ಈ ಎಲ್ಲ ಸಿನಿಮಾಗಳು ಅನಿಮೇಷನ್ ಸಿನಿಮಾಗಳು ಆಗಿರುತ್ತವೆಯೇ ಅಥವಾ ಫೀಚರ್ ಫಿಲಮ್​ಗಳಾಗಿರುತ್ತವೆಯೇ ಎಂಬುದು ಕಾದು ನೋಡಬೇಕಿದೆ. ‘ಮಹಾವತಾರ ಯೂನಿವರ್ಸ್’ ಘೋಷಣೆ ಮಾಡಿರುವ ಹೊಂಬಾಳೆ, ‘ಸಾಧ್ಯತೆಗಳಿಗೆ ಕೊನೆಯೇ ಇಲ್ಲ. ನಮ್ಮ ಪಾತ್ರಗಳು ತೆರೆಯ ಮೇಲೆ ಘರ್ಜಿಸುವುದನ್ನು ನೋಡಲು ನಾವು ಉತ್ಸಾಹಭರಿತವಾಗಿದ್ದೇವೆ. ಅದ್ಭುತವಾದ ಸಿನಿಮಾ ಜರ್ನಿಗೆ ತಯಾರಾಗಿರಿ’ ಎಂದಿದೆ.

ಮಹಾವತಾರ ಯೂನಿವರ್ಸ್​​ನ ಒಂದು ಸಿನಿಮಾದಲ್ಲಿ ಪ್ರಭಾಸ್ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!