‘ಲವ್ ಮಾಕ್ಟೇಲ್ 3’ ಶೀಘ್ರದಲ್ಲೇ ಚಿತ್ರೀಕರಣ

‘ಲವ್ ಮಾಕ್ಟೇಲ್ 3’ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಡಾರ್ಲಿಂಗ್ ಕೃಷ್ಣ ಘೋಷಿಸಿದ್ದಾರೆ.

ಲವ್ ಮಾಕ್ಟೇಲ್ 3’ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಈ ಮೊದಲೇ ಘೋಷಣೆ ಮಾಡಿದ್ದರು. ಆದರೆ ಚಿತ್ರ ಇನ್ನೂ ಸೆಟ್ಟೇರಿಲ್ಲ. ಮುಂದಿನ ತಿಂಗಳಿಂದ ಸಿನಿಮಾದ ಶೂಟ್ ಆರಂಭವಾಗಲಿದೆ, ಈಗ  ಚಿತ್ರತಂಡದವರು 5ರಿಂದ 8 ವರ್ಷದ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅದು ಸಿಕ್ಕ ಬಳಿಕ ಶೂಟಿಂಗ್ ಆರಂಭ ಆಗಲಿದೆ.

‘ನಾನು ಈ ಮೊದಲು ಒಂದು ಕಥೆ ಬರೆದಿದ್ದೆ. ಅದು  ತೃಪ್ತಿ ಕೊಡಲಿಲ್ಲ. ಕಳೆದ ತಿಂಗಳು ಬೇರೆ  ಐಡಿಯಾ ಹೊಳೆಯಿತು. ಅದನ್ನು ಅಭಿವೃದ್ಧಿ ಮಾಡಿದೆ.  ಕಥೆ ನಮಗೆ ಮೊದಲು ಎಗ್ಸೈಟ್ ನೀಡಬೇಕು. ಮೊದಲ ಸಿನಿಮಾ ಮಾಡೋದು ಸುಲಭ. ಆದರೆ ಅದಕ್ಕೆ ಸೀಕ್ವೆಲ್​ಗಳನ್ನು ಮಾಡೋದು ತುಂಬಾ ಕಷ್ಟ.  ಈ ರೀತಿಯ ಭಾವನಾತ್ಮಕ ಸಿನಿಮಾಗಳಲ್ಲಿ ಸೀಕ್ವೆಲ್ ಕಷ್ಟ’ ಎಂದು ಕೃಷ್ಣ ಅವರು ಹೇಳಿದ್ದಾರೆ.
‘ಎರಡನೇ ಪಾರ್ಟ್​ನಿಂದ ಕಂಟ್ಯುನಿಟಿ ಇರಲಿದೆ. ಮಿಲನಾ ಇರ್ತಾರಾ ಇರಲ್ವಾ?  ಹೊಸ ಪಾತ್ರಗಳು ಯಾವುದೆಲ್ಲ ಬರುತ್ತೆ ಅನ್ನೋ ಕುತೂಹಲ ಇರಲಿ’ ಎನ್ನುತ್ತಾರೆ ಕೃಷ್ಣ.
2020ರಲ್ಲಿ ರಿಲೀಸ್ ಆದ  ‘ಲವ್ ಮಾಕ್ಟೇಲ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾಗೆ ಸೀಕ್ವೆಲ್ ಕೂಡ ಮಾಡಲಾಯಿತು. ಅದು  ದೊಡ್ಡ ಯಶಸ್ಸು ಕಂಡಿತು. ಈಗ ಚಿತ್ರದ ಮೂರನೇ ಸೀಕ್ವೆಲ್  ಬರುತ್ತಿದೆ.
Be the first to comment

Leave a Reply

Your email address will not be published. Required fields are marked *

Translate »
error: Content is protected !!