Jana nayagan : ಒಂದೆ ದಿನದಲ್ಲಿ “ಜನ ನಾಯಗನ್ ” ಚಿತ್ರದ ಪೋಸ್ಟರ್ 3.24ಲಕ್ಷ ವೀಕ್ಷಣೆ

ಭರ್ಜರಿಯಾಗಿ ಸದ್ದು ಮಾಡ್ತಿದೆ “ಜನ ನಾಯಗನ್” ಚಿತ್ರ. ಈ ಸಿನಿಮಾದ ಮೊದಲ ಲುಕ್ ಬಿಡುಗಡೆಯಾದ 24 ಗಂಟೆಗಳಲ್ಲಿ 3.24 ಮೂರು ಕೋಟಿ ಇಪ್ಪತ್ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು 5 ಕೋಟಿಯ ಕಡೆ ಮುನ್ನುಗ್ಗುತಿದೆ. ಕೆ.ವಿ.ಎನ್ ಸಂಸ್ಥೆಯ ನಿರ್ಮಾಪಕ ವೆಂಕಟ್. ಕೆ. ನಾರಾಯಣ ನಿರ್ಮಾಣದಲ್ಲಿ ದಳಪತಿ ನಟ ವಿಜಯ್ ನಟನೆಯ 69ನೇ ಚಿತ್ರವಾದ “ಜನ ನಾಯಗನ್” ಫಸ್ಟ್ ಲುಕ್ ಅಭಿಮಾನಿಗಳ ಖುಷಿಯನ್ನ ಡಬಲ್ ಧಮಾಕ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿರುವ ದಳಪತಿ ವಿಜಯ್ ರವರ ಫಸ್ಟ್ ಲುಕ್ ಬಹಳಷ್ಟು ಕುತೂಹಲವನ್ನು ಮೂಡಿಸಿದೆ.

ಅದ್ದೂರಿ ವೆಚ್ಚದಲ್ಲಿ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿರುವ ಈ “ಜನ ನಾಯಗನ್” ಚಿತ್ರವು ಭಾರತ ಸೇರಿದಂತೆ ವಿದೇಶಗಳಲ್ಲೂ ಅದ್ದೂರಿಯಾಗಿ ಬಿಡುಗಡೆ ಮಾಡಲು ತಂಡ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದು, ಈ ಚಿತ್ರವು ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ವಿಶೇಷ ದಿನದಂದು ಬಿಡುಗಡೆ ಮಾಡಲು ನಿರ್ಧರಿಸಿದ್ದು , 2026 ಜನವರಿ 9ರಂದು ಪ್ರೇಕ್ಷಕರ ಮುಂದೆ ಬರಲಿದೆ.

ಈಗ ನಟ ದಳಪತಿ ವಿಜಯ್ ರವರ 51ನೇ ಜನ್ಮದಿನಕ್ಕಾಗಿ “ಜನ ನಾಯಗನ್” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಪಕ ವೆಂಕಟ್. ಕೆ . ನಾರಾಯಣ ನಿರ್ಮಾಣದ ಈ ಅದ್ದೂರಿ ಚಿತ್ರದ ಮೊದಲ ನೋಟ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.

ನಟ ದಳಪತಿ ವಿಜಯ್ ಎಂಟ್ರಿಯಾಗಿರುವ ಪೊಲೀಸ್ ಖದರ್ ಲುಕ್ , ರಾಯಲ್ ಸಿಂಹಾಸನದ ಮೇಲೆ ಖಡ್ಗ ಹಿಡಿದು ಕುಳಿತಿರುವ ಮಾಸ್ ಪೋಸ್ಟರ್ ಅಭಿಮಾನಿಗಳಲ್ಲಿ ಬಹಳಷ್ಟು ಕುತೂಹಲವನ್ನು ಮೂಡಿಸಿದೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಚಿತ್ರವು ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಲಿದೆಯಂತೆ.
ಸದ್ಯ ನಟ ವಿಜಯ್ ಸಿನಿಮಾಗಿಂತಲೂ ರಾಜಕೀಯದ ಕಡೆ ಹೆಚ್ಚಾಗಿ ಗಮನ ಹರಿಸುತ್ತಿದ್ದು, ತಮ್ಮದೇ ಹೊಸ ಪಕ್ಷದ ಕೆಲಸ ಕಾರ್ಯದಲ್ಲಿ ತೊಡಗಿದ್ದಾರಂತೆ. ಇದು ಇವರ ಕೊನೆಯ ಚಿತ್ರವಾಗಿದ್ದು , ವೆಂಕಟ್ . ಕೆ. ನಾರಾಯಣ ನಿರ್ಮಾಣದ ಈ ಹೈ ಬಜೆಟ್ “ಜನ ನಾಯಗನ್” ಚಿತ್ರವನ್ನ ಹೆಚ್ . ವಿನೋತ್ ನಿರ್ದೇಶನ ಮಾಡುತ್ತಿದ್ದು, ಅನಿರುದ್ದ್ ರವಿಚಂದರ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣ , ಆನ್ಲ್ ಅರಸು ಸಾಹಸ , ಪ್ರದೀಪ್ ಇ ರಾಘವ ಸಂಕಲನ , ಶೇಖರ್ ವಿ. ಜಿ . ,ಸುಧನ್ ನೃತ್ಯ ನಿರ್ದೇಶನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!